Archive for ಡಿಸೆಂಬರ್ 11, 2011


   ಜುಲೈ  3 ಮತ್ತು  21, 2011

  ಹನುಮಂತನಗರದ ಕಲಾಸೌಧ ರಂಗಮಂದಿರದಲ್ಲಿ ಕಮಲಮಣಿ ಕಾಮಿಡಿ ಕಲ್ಯಾಣದ ಮರುಪ್ರದರ್ಶನ.

ಕಳೆದ ವರ್ಷವಷ್ಟೇ ’ಕಲ್ಯಾಣದ ದಿನಗಳು’ ನಾಟಕವನ್ನು ಬರೆದು ಮುಗಿಸಿದ ಪ್ರೊ.ಕಾ.ವೆಂ.ರಾಜಗೋಪಾಲ್ ಈ ವರ್ಷ ಮತ್ತೊಂದು ನಾಟಕವನ್ನು ಬರೆದಿದ್ದಾರೆ.   ನವಕರ್ನಾಟಕ ಬಳಗ ಈ ನಾಟಕದ ವಾಚನವನ್ನು     ತಮ್ಮ ಆಪೀಸಿನ ಆವರಣದಲ್ಲಿ ಆಯೋಜಿಸಿತ್ತು.. ನಾಟಕವಾಚನ ಎಂದರೆ ಸಾಮಾನ್ಯ ಒಬ್ಬರೇ ಓದುವುದು  ರೂಢಿಯಲ್ಲಿದ್ದು, ಈ ಪದ್ಧತಿ ಒಂದಿಷ್ಟು ಬೋರು ಹೊಡೆಸಿಬಿಡಬಹುದೆಂಬ ಆತಂಕದಿಂದ ಸಂಚಾರಿ ಥಿಯೇಟರ್ ಕಲಾವಿದರು ಈ ನಾಟಕವನ್ನು ಗುಂಪಿನಲ್ಲಿ ಕೂತು ಓದುವ ಪ್ರಯತ್ನ ಮಾಡಿದರು.  ಜೂನ್ ೧೧ ರಂದು ಈ ನಾಟಕದ ವಾಚ ನ  ನಾಟಕಕಾರರ ಸಮ್ಮುಖದಲ್ಲಿ ರಂಗಾಸಕ್ತರ ನಡುವೆ ನಡೆಯಿತು.

ಈ ಪ್ರಯತ್ನವನ್ನು ಶ್ಲಾಘಿಸಿದ ಸುಚಿತ್ರಾ ಕಲಾಕೇಂದ್ರ ದ ಬಳಗದವರು ಸುಚಿತ್ರಾಕಲಾಕೇಂದ್ರದಲ್ಲಿ ೧೦ನೇ ಜುಲೈ, ೨೦೧೧, ಭಾನುವಾರದಂದು ಕನ್ನಡ ಚಿಂತನೆ  ಕಾರ್ಯಕ್ರಮದಡಿಯಲ್ಲಿ ಮತ್ತೊಮ್ಮೆ ಈ ನಾಟಕದ ವಾಚನವನ್ನು ಆಯೋಜಿಸಿದ್ದರು. ಸಂಚಾರಿ ಥಿಯೇಟರ್ ಕಲಾವಿದರಿಂದ ನಾಟಕವಾಚನದ ಮರುಪ್ರದರ್ಶನವಾಯಿತು.

27 ಮಾರ್ಚ್ 2011

ಸಂಚಾರಿ ಥಿಯೇಟರ್ ಮತ್ತು ಜಾಗೃತಿ ಮಹಿಳಾ ಅಧ್ಯಯನ ಕೇಂದ್ರ ಆಚರಿಸಿದ ವಿಶ್ವರಂಗದಿನ 2011 ಮತ್ತು ಮಹಿಳಾ ದಿನದ ನೂರರ ನೆನಪಿಗೆ “ವೈದೇಹಿ ಕಾವ್ಯ ತೋರಣ”

ಲೇಖಕಿಯರು ಮತ್ತು ರಂಗಕಲಾವಿದೆಯರು ಕನ್ನಡದ ಪ್ರಸಿದ್ಧ ಕವಯತ್ರಿ ವೈದೇಹಿಯವರ ಕವನಗಳನ್ನು   ಡಾ. ಬಿ.ಎನ್.ಸುಮಿತ್ರಾಬಾಯಿಯವರ ಸಾರಥ್ಯದಲ್ಲಿ ವಾಚನ ಮಾಡಿದರು.

ನಂತರ ಹೆಚ್.ಎಸ್.ವೆಂಕಟೇಶಮೂರ್ತಿಯವರ ’ಊರ್ಮಿಳಾ” ನಾಟಕ ಪ್ರದರ್ಶನ ನಡೆಯಿತು.