Latest Entries »

ಸಂಚಾರಿ ಥಿಯೇಟರ್ ಪ್ರತಿ ವರುಷದಂತೆ ಈ ಬಾರಿಯೂ “ಪೂರ್ವರಂಗ” ಅಭಿನಯ ಕಾರ್ಯಾಗಾರವನ್ನು (ಸೆಪ್ಟೆಂಬರ್ 20 ರಿಂದ ಫೆಬ್ರವರಿ 5) ಹಮ್ಮಿಕೊಂಡಿತ್ತು.ರಂಗಭೂಮಿಯಲ್ಲಿ ಕೆಲಸ ಮಾಡಲು ಇಚ್ಚಿಸುವ ಹೊಸ ಹುಡುಗರನ್ನು ಈ ನಾಲ್ಕೂವರೆ ತಿಂಗಳ ಕಾಲ ರಂಗತರಬೇತಿಗೆ ಒಳಪಡಿಸಿತ್ತು. ಈ ಕಾರ್ಯಾಗಾರದ ಸಮಾರೋಪ ಸಮಾರಂಭವು ಇದೇ ಫೆಬ್ರವರಿ 5 ರಂದು ಭಾನುವಾರ ಕೆ.ಹೆಚ್.ಕಲಾಸೌಧದಲ್ಲಿ ನಡೆಯಿತು. ಶಿಬಿರಾರ್ಥಿಗಳು ಮೋಲಿಯರ್ ನಾಟಕ ಮಾಮಾಮೋಶಿ ಯನ್ನು ಅಭಿನಯಿಸಿದರು. ಈ ನಾಟಕವನ್ನು ಕನ್ನಡಕ್ಕೆ ತಂದವರು ಕೆ.ವಿ.ಸುಬ್ಬಣ್ಣ. ಈ ನಾಟಕಕ್ಕೆ ಮಂಜು ನಾರಾಯಣ್ ಅವರು ಬೆಳಕಿನ ವಿನ್ಯಾಸವನ್ನು, ಗಜಾನನ.ಟಿ.ನಾಯ್ಕ್ ಅವರು ಸಂಗೀತ ನಿರ್ದೇಶನವನ್ನು, ವಿನ್ಯಾಸ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಮಂಗಳಾ.ಎನ್ ನಿರ್ವಹಿಸಿದ್ದರು. ಈ ನಾಟಕದ ಮೂಲಕ ಕನ್ನಡ ರಂಗಭೂಮಿಗೆ ಹೊಸದಾಗಿ ಒಂದು ತಂಡ ಪಾದಾರ್ಪಣೆ ಮಾಡುತ್ತಿದೆ. ಈ ಹೊಸ ಕಲಾವಿದರಿಗೆ ಶುಭನುಡಿಯನ್ನು ಹೇಳಲು ಅಂಕಲ್ ಶ್ಯಾಂ ಆಗಮಿಸಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.

Photoes: FOCUS

Photoes: Focus

purvaranga-09