Latest Entries »

 

ಗಜಾನನ. ಟಿ.ನಾಯ್ಕ ಅವರ ಸಾರಥ್ಯದಲ್ಲಿ ಈ ಬಾರಿ ಸಂಚಾರಿ ಚಿಣ್ಣರು ಜಾನಪದ ಲೋಕಕ್ಕೆ. ಶಿಬಿರ ನಾಳೆ ಏಪ್ರಿಲ್ ೧೫ ರಿಂದ ಪ್ರಾರಂಭ! ಮಕ್ಕಳನ್ನು ಎದುರುಗೊಳ್ಳಲು ಸಂಚಾರಿ ಟೀಂ ರೆಡಿ!

Scamp-001

ಸಂಚಾರಿ ಥಿಯೇಟರ್
ಈ ಸಲ ಬೇಸಿಗೆಯಲ್ಲ ವಸತಿ ಸಹಿತ(Residential) ಮಕ್ಕಳ ಬೇಸಿಗೆ ರಂಗಶಿಬಿರವನ್ನು ಏಪ್ರಿಲ್ 15 ರಿಂದ 30 ರ ವರೆಗೆ
ರಾಮನಗರದ , ಜಾನಪದ ಲೋಕದಲ್ಲಿ, ಗಜಾನನ .ಟಿ. ನಾಯ್ಕ ಅವರ ನೇತೃತ್ವದಲ್ಲಿ  ಕರ್ನಾಟಕ ಜಾನಪದ ಪರಿಷತ್ ಸಹಯೋಗದಲ್ಲಿ, ಕರ್ನಾಟಕ ಜಾನಪದ ಅಕಾಡೆಮಿ ಸಹಕಾರದೊಂದಿಗೆ ಆಯೋಜಿಸಿದೆ.
R2

ವಸತಿ ಸಹಿತ ಮಕ್ಕಳ ಶಿಬಿರ -ರಾಮನಗರದ ಜಾನಪದ ಲೋಕದಲ್ಲಿ
ಸಂಚಾರಿ ಥಿಯೇಟರ್ ಪ್ರತಿವರ್ಷ ಮಕ್ಕಳಿಗಾಗಿ “ವಾರಾಂತ್ಯ ರಂಗಭೂಮಿ” ಮತ್ತು “ಬೇಸಿಗೆಯಲ್ಲಿ ಮಕ್ಕಳ ಬೇಸಿಗೆ ಶಿಬಿರ” ಗಳನ್ನು ನಡೆಸುತ್ತಾ ಬಂದಿದೆ. ಆದರೆ ಈ ಬಾರಿ ಮಕ್ಕಳಿಗೆ ಮತ್ತೊಂದು ಹೊಸ ಅನುಭವವನ್ನು ನೀಡುವ ಉದ್ದೇಶ ದಿಂದ ಮತ್ತು ಪೋಷಕರ ಒತ್ತಾಸೆಯಿಂದ “ವಸತಿ ಸಹಿತ ಮಕ್ಕಳ ಬೇಸಿಗೆ ಶಿಬಿರ”ವನ್ನು ಹಮ್ಮಿಕೊಂಡಿದೆ.
ಈ ಶಿಬಿರ ಯಾವಾಗಲೂ ಇರುವಂತೆ ಹಾಡು, ನೃತ್ಯ, ಮೋಜು, ಚಿತ್ರ, ಬಣ್ಣ, ನಾಟಕ ಅಷ್ಟೇ ಆಗಿರದೆ ಅದರ ಜೊತೆಯಲ್ಲಿ ಮಗು ನಿತ್ಯ ತಾನು ತೊಡಗಿಸಿಕೊಳ್ಳುವ ದಿನಚರಿಯ ಎಲ್ಲ ಚಟುವಟಿಕೆಗಳನ್ನು ತಾನೇ ಸಂತೋಷದಿಂದ ನಿಭಾಯಿಸುವ ಹಾಗೆ ಮತ್ತು ದಿನ ನಿತ್ಯದ ಎಲ್ಲ ಕೆಲಸಗಳನ್ನು ಸಂಭ್ರಮಿಸುವ ಹಾಗೆ ಕಾರ್ಯಕ್ರಮಗಳನ್ನು, ಅಭ್ಯಾಸಗಳನ್ನು ರೂಪಿಸಿರಲಾಗುತ್ತದೆ. ಈ ಮೂಲಕ ಬಗು ಬದುಕಿನ ಎಲ್ಲ ಆಗುಹೋಗುಗಳನ್ನು ಸಂತೋಷದಿಂದ ಸ್ವೀಕರಿಸುವ ಮನೋಧೋರಣೆಯನ್ನು ಹೊಂದಲಿ ಎಂಬುದು ನಮ್ಮ ಆಶಯ.

ಇದರ ಜೊತೆಗೆ ಜಾನಪದ ನೃತ್ಯ ಪ್ರಕಾರಗಳ ಪರಿಚಯ ಆಗುತ್ತದೆ. ಚಿತ್ರ ಕಲೆಗ ಸಂಬಂಧ ಪಟ್ಟಂತೆ ಅಭ್ಯಾಸಗಳಿರುತ್ತವೆ. ಮಣ್ಣಿನೊಡನೆ ಆಟ, ಬಣ್ಣದೊಡನೆ ಆಟ, ರಂಗಾಟಗಳಿರುತ್ತವೆ. ಸಣ್ಣ ಪ್ರವಾಸ, ಬೆಟ್ಟ ಹತ್ತುವ ಆಟ,ಹಳ್ಳಿಗೆ ಭೇಟಿ, ಹಸಿರು ತುಂಬಿರುವ ಆವರಣದ ತೊಟ್ಟಿ ಮನೆಯ ವಾಸ, ಬಹಳಷ್ಟು ಮರೆತೇ ಹೋಗಿಬಿಟ್ಟಿರುವ ನಮ್ಮದೇ ದೇಸೀ ಸಂಪ್ರದಾಯದ ಹಲವು ಅನುಭವಗಳನ್ನು ನೆನಪಿಸಿಕೊಳ್ಳುವಂತಹ ಒಂದಷ್ಟು ಕಾರ್ಯಕ್ರಮಗಳು ಯೋಜಿಸಲ್ಪಟ್ಟಿರುತ್ತವೆ. ನಗರದ ಬದುಕಿಗೆ ತೆರೆದುಕೊಂಡಿರುವ ಇಂದಿನ ಮಕ್ಕಳಿಗೆ ನಗರದಲ್ಲಿ ಸುಲಭಕ್ಕೆ ಸಿಗಲಾರದ ಹಲವು ಅನುಭವಗಳಿಗೆ ಅವರನ್ನು ತೆರೆದಿಡುವುದಷ್ಟೇ ನಮ್ಮ ಆಶಯ. ಅಂತಿಮವಾಗಿ ಒಂದು ಪ್ರದರ್ಶನವಿರುತ್ತದೆ. ಅದಕ್ಕೂ ಬಹು ಮುಖ್ಯವಾಗಿ ಶಿಬಿರ ಮುಗಿಸಿ ಹೊರಡುವ ಮುನ್ನ ಅವರಿಗೆ ಕೊಂಡೊಯ್ಯಲು ಒಂದು ನೆನಪಿನ ಬುತ್ತಿಯ ಬಾಗಿನ ಕಟ್ಟಲ್ಪಟ್ಟಿರುತ್ತದೆ.

ಶೇಕ್ಸ್ ಪಿಯರ್ ವಿರಚಿತ ನಾಟಕಗಳ ಪ್ರದರ್ಶನ
ಇಂದಿನಿಂದ ರಂಗಶಂಕರದಲ್ಲಿ.

Namana

 

ShaksphereNAMANA6

ಜಗತ್ತಿನ ಶ್ರೇಷ್ಠ ನಾಟಕಕಾರನಾದ ವಿಲಿಯಂ ಶೇಕ್ಸ್ ಪಿಯರ್ ನ ನಾನೂರನೇ ಪುಣ್ಯತಿಥಿಯನ್ನು ಈ ವರ್ಷ ಪ್ರಪಂಚದಾದ್ಯಂತ ಆಚರಿಸುತ್ತಿದ್ದಾರೆ. ನಮ್ಮ ಶಾಲಾ-ಕಾಲೇಜುಗಳ ಇಂಗ್ಲೀಷ್ ಪಠ್ಯ ಪುಸ್ತಕಗಳ ಮೂಲಕ, ಕನ್ನಡ ಲೇಖಕರ ಅನುವಾದ, ರೂಪಾಂತರಗಳ ಮೂಲಕ ಕನ್ನಡ ರಂಗಭೂಮಿ ಮತ್ತು ಕನ್ನಡ ಸಂಸ್ಕೃತಿಯನ್ನುನೂರಾರು ವರ್ಷಗಳ ಹಿಂದೆಯೇ ಶೇಕ್ಸ್ ಪಿಯರ್ ಪ್ರವೇಶಿಸಿದ್ದಾನೆ ಹಾಗೂ ಆಳವಾಗಿ ಪ್ರಭಾವಿಸಿದ್ದಾನೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಹವ್ಯಾಸಿ ತಂಡಗಳಾದ ನಾವು (ಸಂಚಾರಿ ಥಿಯೇಟರ್, ಅಭಿನಯ ತರಂಗ, ಸಮಷ್ಟಿ, ದೃಶ್ಯ ಮತ್ತು ಸಂಚಯ) ದಿನಾಂಕ ೨೯ ಮಾರ್ಚ್ ೨೦೧೬ ರಿಂದ ರಂಗಶಂಕರದಲ್ಲಿ ಶೇಕ್ಸ್ಪಿಯರ್ ನಾಟಕೋತ್ಸವವನ್ನು “ಶೇಕ್ಸ್ ಪಿಯರ್ ನಮನ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.

 

Julius Ceasar - Abhinaya Taranga

12th Night - Drushya

Neeru Kudisidha Neereyaru - Samasthi001 (1)Tempest - Sanchaya

01236AAAA

William Shakespeare is one of the most renowned playwrights known to mankind. His works are popular and familiar not only in English but in many languages across the world and his works are the most translated ones into local languages and known throughout the world. Even in India we have celebrated the works of Shakespeare in almost all languages known in our country. Probably one of the best explored has been in Kannada. All his plays are translated into Kannada by renowned experts in Kannada language.His plays are also been staged from time immemorial by various directors giving it their own form and interpretations and making it never boring to the every loving audience.2016 commemorates 400 years since the death of this great writer. To celebrate his works, five teams from Bangalore have come together for the first time in a very unique way and offering their tribute through Shakespeare Namana a weeklong festival.

.AbhinayaTararanga, Drishya, Samashti, Sanchari Theatre and Sanchaya bring to you five of his classics from March 29th to April 2nd at Rangashankara, JP Nagar, Bangalore.Come be a part of this celebration and enjoy the works of William Shakespeare through these plays.

Sanchari theatre is performing Merchant of Venice as “Veniccina vyaapaara” translated by K.V Akshara April 1st 2016 in Rangashankara at 7.30 pm  Lighting by Vinayachandra, Music by Gajanana.T.Naik and Designed and Directed by Mangala.N

ShaksphereNAMANA6

ಇದೇ ತಿಂಗಳು ೨೬ ನೆ ತಾರೀಖು ರಂಗಶಂಕರದಲ್ಲಿ ಕೆ.ವಿ.ಅಕ್ಷರ ಅವರು ರಚಿಸಿರುವ ಸಂಸಾರದಲ್ಲಿ ಸನಿದಪ ನಾಟಕದ ಪ್ರದರ್ಶನ “Misunderstanding ” ರಂಗಶಂಕರದಲ್ಲಿದೆ. ಎರಡು ಪ್ರದರ್ಶನಗಳು ! ಮದ್ಯಾಹ್ನ 3.30 ಮತ್ತು ಸಂಜೆ 7.30 ಗೆ. ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಈ ನಾಟಕವನ್ನು ನಿರ್ದೇಶಿಸಿದ್ದಾರೆ.mis to fb

   mudi dore

ಪೂರ್ವರಂಗ ಅಭಿನಯ ಕಾರ್ಯಾಗಾರದ ಸಮಾರೋಪ ಸಮಾರಂಭ

ನಟನೆಯ ಬಗೆಗಿನ ಕಲಿಕೆ ನಿರಂತರವಾದದ್ದು. ಮೊದ ಮೊದಲಿಗೆ ತೀರಾ ಸುಲಭ ಎನಿಸುತ್ತಾ ನಂತರದಲ್ಲಿ ಸಂಕೀರ್ಣವಾಗಿ ಸಾಗುವ ಈ ಪ್ರಕ್ರಿಯೆಗೆ ತರಬೇತಿಯೆಂಬ ಅಡಿಗಲ್ಲು ಸಿಕ್ಕಲ್ಲಿ ಸಾಗುವ ದಾರಿಗೆ ಒಂದಿಷ್ಟು ಹೊಳಪು ಸಿಗುತ್ತದೆ. ರಂಗತರಬೇತಿಯಲ್ಲಿ ಏಕ ಕಾಲಕ್ಕೆ ದೇಹ, ಮನಸ್ಸು, ಮಾತು, ಚಿಂತನೆ ಮತ್ತು ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳುವ ಕಸರತ್ತು ಮಾಡಬೇಕಾಗುತ್ತದೆ. ಸಾಹಿತ್ಯವನ್ನು ಓದುತ್ತಾ, ಅರ್ಥ ಮಾಡಿಕೊಳ್ಳುತ್ತಾ, ಅರಗಿಸಿಕೊಳ್ಳುತ್ತಾ ಅದನ್ನು ಪ್ರದರ್ಶನಕ್ಕೆ ಸಜ್ಜುಗೊಳಿಸಬೇಕಾಗುತ್ತದೆ. ಹಾಗಾಗಿ ರಂಗಭೂಮಿ ಭೌದ್ಧಿಕವೂ, ಇಂದ್ರಿಯವೂ, ಆಂಗಿಕವೂ ಆಗಿರುತ್ತದೆ. ನಟನಾಗ ಬಯಸುವವನು ಮೊದಲಿಗೆ ತನ್ನನ್ನು ತಾನು ಅರಿತುಕೊಳ್ಳಬೇಕಾಗುತ್ತದೆ ಮತ್ತು ಅರಿವನ್ನು ವಿಸ್ತರಿಸಿಕೊಳ್ಳಬೇಕಾಗುತ್ತದೆ. ಅಂದರೆ ನಟ ತನ್ನನ್ನು ಒರೆಗೆ ಹಚ್ಚಿಕೊಳ್ಳಬೇಕು. ಅದಕ್ಕೆ ತರಬೇತಿಯ ಅವಶ್ಯಕತೆ ಇರುತ್ತದೆ. ಇದೊಂದು ನಿರಂತರ ಪ್ರಕ್ರಿಯ. ಸಂಚಾರಿ ಥಿಯೇಟರ್ ಈ ನಿಟ್ಟಿನಲ್ಲಿ ಅಭಿನಯ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು. ನಟನೊಬ್ಬ ರಂಗಪ್ರವೇಶಕ್ಕೆ ಮುನ್ನ ನಡೆಸುವ ಸಿದ್ಧತೆಯೇ ಪೂರ್ವರಂಗ!

IMG_4486

ಈ ವರುಷ ಪೂರ್ವರಂಗದ ಮುಕ್ತಾಯದ ಈ ಹೊತ್ತಿನಲ್ಲಿ ಹೆಚ್.ಎಸ್.ವೆಂಕಟೇಶ ಮೂರ್ತಿಯವರ “ಮುದಿ ದೊರೆ ಮತ್ತು ಮೂವರು ಮಕ್ಕಳು” ನಾಟಕವನ್ನು ರಂಗಕ್ಕೆ ತರುವ ಪ್ರಯತ್ನ ಮಾಡಲಾಗಿದೆ. ಈ ನಾಟಕವನ್ನು ಎನ್.ಮಂಗಳಾ ಅವರು ನಿರ್ದೇಶಿಸಿದ್ದು, ಗಜಾನನ.ಟಿ.ನಾಯ್ಕ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಅರವಿಂದ್ ಕುಪ್ಳೀಕರ್ ಅವರ ರಂಗವಿನ್ಯಾಸ ಮತ್ತು ಬೆಳಕಿನ ವಿನ್ಯಾಸ ಇದೆ. ವಿಜಯ್ ಕುಮಾರ್ ಬೆಣಚ ಅವರ ಪ್ರಸಾಧನದ ಚಳಕ ಇಲ್ಲಿದೆ. ಈ ನಾಟಕದ ರಂಗಪ್ರದರ್ಶನದ ಮೂಲಕ ಹೊಸ ನಟರ ಗುಂಪೊಂದನ್ನು ಸಂಚಾರಿ ಥಿಯೇಟರ್ ಕನ್ನಡ ರಂಗಭೂಮಿಗೆ ಪರಿಚಯಿಸುತ್ತಿದೆ.

ಈ ಸಮಾರೋಪ ಕಾರ್ಯಕ್ರಮಕ್ಕೆ ಹೆಚ್.ಎಸ್.ವೆಂಕಟೇಶಮೂರ್ತಿಯವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಾಗಿರುತ್ತಾರೆ. ಬಿ.ವಿ.ರಾಜಾರಾಂ ಅವರು ಅಭ್ಯರ್ಥಿಗಳಿಗೆ ಶುಭ ನುಡಿಯುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡುತ್ತಾರೆ.

 

Follow

Get every new post delivered to your Inbox.

Join 280 other followers