481981_3560254059314_919398676_n

ಕನ್ನಡ ಸಾಹಿತ್ಯದಲ್ಲಿ ಎಂ.ಎ. ಮಾಡಿ ‘ಸಮುದಾಯ’ದ ಮೂಲಕ ನಾಟಕರಂಗಕ್ಕೆ ಪಾದಾರ್ಪಣೆ ಮಾಡಿರುವ ಎನ್. ಮಂಗಳಾ ರಂಗಾಯಣದಲ್ಲಿ ಬಿ.ವಿ ಕಾರಂತರ ಗರಡಿಯಲ್ಲಿ ನಾಟಕ ಕಲಿಕೆಯ ಹಲವು ಸಾಧ್ಯತೆಗಳ ಬೆಳಕಿಗೆ ತೆರೆದುಕೊಂಡವರು.

ಅಲ್ಲಿಯೇ 13 ವರ್ಷಗಳ ಕಾಲ ರಂಗಕಲಾವಿದೆಯಾಗಿ ಕೆಲಸ ನಿರ್ವಹಿಸಿದ್ದಾರೆ. ಕಳದ ಎರಡು ದಶಕಗಳಿಂದ ರಂಗಭೂಮಿಯಲ್ಲಿ ನಟಿಯಾಗಿ, ನಿರ್ದೇಶಕರಾಗಿ ವಸ್ತ್ರ ವಿನ್ಯಾಸಕರಾಗಿ ಹಲವಾರು ನಾಟಕಗಳನ್ನು ಮಕ್ಕಳಿಗಾಗಿ ಮತ್ತು ವಯಸ್ಕರಿಗಾಗಿ ನಿರ್ದೇಶಿಸಿದ್ದಾರೆ.

ಮಂಗಳಾ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಕೇಂದ್ರದಿಂದ ಜ್ಯೂನಿಯರ್ ಮತ್ತು ಸೀನಿಯರ್ ಫೆಲೋಶಿಪ್ ಗಳನ್ನು ಪಡೆದಿದ್ದಾರೆ, ಪ್ರಸ್ತುತಸಂಚಾರಿ ಥಿಯೇಟ್ರು ತಂಡದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ

Advertisements