Category: ಹೀಗೆರಡು ಕತೆಗಳು


This slideshow requires JavaScript.

ಮೌನೇಶ್ ಎಲ್. ಬಡಿಗೇರ್

               ಇತ್ತೀಚೆಗೆ ರಂಗಶಂಕರದಲ್ಲಿ ಸಂಚಾರಿ ರಂಗತಂಡವು `ಹೀಗೆರಡು ಕಥೆಗಳು` ಎಂಬ ರಂಗಪ್ರಯೋಗವನ್ನು ಎನ್. ಮಂಗಳಾರವರ ನಿರ್ದೇಶನದಲ್ಲಿ ಪ್ರದರ್ಶಿಸಿತು. ಕನ್ನಡದಲ್ಲಿ ಸದ್ಯ ಸಕ್ರಿಯರಾಗಿ ಬರೆಯುತ್ತಾ, ಓದುಗ ಬಳಗವನ್ನೇ ಹುಟ್ಟುಹಾಕಿದ ವಸುಧೇಂದ್ರ ಅವರ `ಶ್ರೀದೇವೀ ಮಹಾತ್ಮೆ` ಹಾಗೂ ಕನ್ನಡದ ಮುಖ್ಯ ಕಥೆಗಾರರಲ್ಲಿ ಒಬ್ಬರಾದ ಜಯಂತ ಕಾಯ್ಕಿಣಿಯವರ `ನೋ ಪ್ರೆಸೆಂಟ್ಸ್ ಪ್ಲೀಸ್` ರಂಗರೂಪಗೊಂಡ ಕಥೆಗಳು.

ವಸುಧೇಂದ್ರ ಅವರ `ಶ್ರೀದೇವೀ ಮಹಾತ್ಮೆ` ರಂಗರೂಪಗೊಂಡು ಸುರೂಪಗೊಂಡರೆ, ಕಾಯ್ಕಿಣಿಯವರ `ನೋ ಪ್ರೆಸೆಂಟ್ಸ್ ಪ್ಲೀಸ್` ರಂಗರೂಪಗೊಂಡೇ ಕುರೂಪಗೊಂಡಿತೇನೋ…

ಬೆಂಗಳೂರೆಂಬ ಐಟಿಸಿಟಿಯ ಬಹುಮಹಡಿ ಅಪಾರ್ಟ್‌ಮೆಂಟಿನಲ್ಲಿ ವಾಸವಾಗಿರುವ ಒಬ್ಬ ಸಾಫ್ಟ್‌ವೇರ್ ಎಂಜಿನಿಯರ್. ಅಷ್ಟು ದೊಡ್ಡ ಅಪಾರ್ಟ್‌ಮೆಂಟಿನ ಹಿಂದೆಯೇ ಇರುವ ಗುಡಿಸಲು ಹೊದ್ದ ಕೊಳಚೆ ಪ್ರದೇಶದಿಂದ ಅವರ ಮನೆಗೆಲಸಕ್ಕೆ ಬರುತ್ತಿರುವವಳು ಶ್ರೀದೇವಿ. ವಯಸ್ಕಳಾಗಿದ್ದೂ ಇನ್ನೂ ಬುದ್ಧಿ ಬಲಿಯದ `ಅಂಕಳ್ ಅಂಕಳ್` ಎಂದು ಕರೆಯುತ್ತಾ ಕನ್ನಡ, ತಮಿಳು, ತೆಲುಗು ಹೀಗೆ ಎಲ್ಲಾ ಭಾಷೆಗಳನ್ನು ಕಲೆಸಿ ಮಾತನಾಡುತ್ತಾಳೆ ಅವಳು.

ವಾರಗಟ್ಟಲೆ ಸ್ನಾನ ಮಾಡದೆ, ಪ್ರತಿಸಾರಿ ತನ್ನನ್ನು ಹೊತ್ತುಬರುವ ಲಿಫ್ಟನ್ನು ಅದೇ ವಿಸ್ಮಯಭರಿತ ಕಣ್ಣುಗಳಿಂದ ನೋಡುತ್ತ, ಮುಗ್ಧವಾಗಿಯೇ ಉಳಿಯುವ ಶ್ರೀದೇವಿ ಮತ್ತು ನಿರೂಪಕ ಸಾಫ್ಟ್‌ವೇರ್ ಎಂಜಿನಿಯರ್‌ನ ನಡುವೆ ಮಾತು-ಕಥೆ ಸಾಗುತ್ತಾ ಶ್ರೀದೇವಿಯ ಬದುಕಿನ ಹಲವು ಮಜಲುಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಶ್ರೀದೇವಿಯಾಗಿ ಸುರಭಿ, ಸಾಫ್ಟ್‌ವೇರ್ ಎಂಜಿನಿಯರಾಗಿ ವಿಜಯ್ ಮತ್ತು ಸೆಕ್ಯೂರಿಟಿಯವನಾಗಿ ಚಂದ್ರಕೀರ್ತಿ ಸಶಕ್ತವಾಗಿ ಅಭಿನಯಿಸಿದ್ದಾರೆ. ರಂಗದ ಮೇಲೆ ಲಿಫ್ಟಿನ ಪರಿಕಲ್ಪನೆ ನಿಜಕ್ಕೂ ಕ್ರಿಯೆಟಿವ್ ಆಗಿತ್ತು.

ಇನ್ನು ಎರಡನೇ ಪ್ರಯೋಗ ಕಾಯ್ಕಿಣಿಯವರ `ನೋ ಪ್ರೆಸೆಂಟ್ಸ್ ಪ್ಲೀಸ್`. ಮುಂಬೈ ಎಂಬ ರಾಕ್ಷಸವೇಗದ ಬದುಕಿನಲ್ಲಿ, ಬಹುರೂಪಿ ಜಗತ್ತಿನಲ್ಲಿ ಪರಸ್ಪರ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದವರು ಅಸಾವರಿ ಲೋಕಂಡೆ ಮತ್ತು ಬೋಪಟ್. ತಮ್ಮ ಮದುವೆಯ ಆಮಂತ್ರಣ ಪತ್ರಿಕೆ ಹೇಗಿರಬೇಕು, ಯಾವ ವಿಷಯ ಇರಬೇಕು, ಯಾರ ಹೆಸರು ಮೊದಲು, ಯಾರ‌್ಯಾರಿಗೆ ಕೊಡಬೇಕು ಎಂದು ಚರ್ಚಿಸಲು ಅವರಿಬ್ಬರೂ ಆಗಷ್ಟೆ ಕಾಮಗಾರಿಯಲ್ಲಿದ್ದ ಯಾವುದೋ ಫ್ಲೈಓವರಿನ ಬದಿಯಲ್ಲಿ ಸೇರುವುದರೊಂದಿಗೆ ಕಥೆ ಆರಂಭವಾಗುತ್ತದೆ.

ಅದು ಕ್ರಮೇಣ ಬೆಳೆದು ತಂದೆ ತಾಯಿ ಯಾರು ಎಂದು ತಿಳಿಯದ ತಮ್ಮಂಥ ಅನಾಥರಿಗೆ ಹೆಸರು ಎಂಬುದು ಎಷ್ಟು ಮುಖ್ಯ ಮತ್ತು ಅಮುಖ್ಯ ಎಂದು ಮುಂಬೈ ನಗರದ ಕೆಳವರ್ಗದ ಜನರ ಅಸ್ಮಿತೆಯ ಪ್ರಶ್ನೆಯನ್ನು ಎತ್ತುತ್ತದೆ ಕಾಯ್ಕಿಣಿಯವರ ಕಥೆ. ಪ್ರಯೋಗದ ದೃಷ್ಟಿಯಿಂದ ಕಾಯ್ಕಿಣಿಯವರ ಪ್ರಸ್ತುತ ಕಥೆ ರಂಗದ ಮೇಲೆ ಯಶಸ್ವಿಯಾಗಿಲ್ಲ ಎಂದೇ ಹೇಳಬೇಕು. ಅದಕ್ಕೆ ಹಲವು ಕಾರಣಗಳಿವೆ.

ಮೇಲ್ನೋಟಕ್ಕೆ ಎರಡೂ ಕಥೆಗಳು ನಗರ ಬದುಕಿನ ತಲ್ಲಣಗಳನ್ನು ಚಿತ್ರಿಸುತ್ತವೆ ಎಂದುಕೊಂಡರೂ ಕಾಯ್ಕಿಣಿಯವರ ನಗರಕ್ಕೂ ವಸುಧೇಂದ್ರರ ನಗರಕ್ಕೂ ಅಜಗಜಾಂತರ ವ್ಯತ್ಯಾಸವಿದೆ.

ವಸುಧೇಂದ್ರರ ಕಥೆಯಲ್ಲಿ ವಿಷಾದವು ಹಾಸ್ಯದ ಮೂಲಕ ಹೊಮ್ಮಿದರೆ, ಕಾಯ್ಕಿಣಿಯವರ ಕಥೆಯಲ್ಲಿ ವಿಷಾದವು ಮತ್ತೊಂದು ಗಾಢ ವಿಷಾದದಿಂದಲೇ ಹೊಮ್ಮುತ್ತಿರುತ್ತದೆ. ಹಾಗಾಗಿ ವಸುಧೇಂದ್ರರ ಯಾವುದೇ ಕಥೆಯನ್ನು ಕೂಡ ರಂಗಕ್ಕೆ ತರುವುದು ತೀರಾ ಸುಲಭವಲ್ಲದಿದ್ದರೂ ಕಷ್ಟವಂತೂ ಖಂಡಿತಾ ಅಲ್ಲ.

ಆದರೆ ಅದೇ ಕಾಯ್ಕಿಣಿಯವರ ಕಥೆಯನ್ನು ರಂಗದ ಮೇಲೆ ಕಟ್ಟುವುದು ಕಟ್ಟುಕಥೆಯಷ್ಟೇ ಕಠಿಣ. ವಸುಧೇಂದ್ರರ ಕಥೆಯ ಅಖಾಡ ಒಂದು ಅಪಾರ್ಟ್‌ಮೆಂಟಾದರೆ ಕಾಯ್ಕಿಣಿಯವರ ಕಥೆಯ ಅಖಾಡ ಅಖಂಡ ಮುಂಬೈ! ಅಂತಹ ಮುಂಬೈಯನ್ನು ಬರೀ ಸೆಟ್ಟಿನ ಮೂಲಕ ಹಿಡಿದಿಡಲು ಬರುವುದಿಲ್ಲ.

ಇನ್ನು ಈ ಪ್ರಯೋಗದಲ್ಲಿ ಅಭಿನಯಿಸಿದ ನಟರ ಸಮೂಹವು ಕೂಡ ಅಷ್ಟೇನೂ ಆಸಕ್ತಿದಾಯಕವಾದ ಪ್ರದರ್ಶನ ಕೊಡದೇ ಇದ್ದ ಕಾರಣ ಇದಕ್ಕೆ ಬಳಸಿದ ಹಾಡುಗಳು ಹಾಗೂ ಮೇಳ ಕೂಡ ಯಾವುದೇ ಪ್ರಭಾವ ಮಾಡದೇ ಉಳಿಯಿತು. ಮೊದಲ ಪ್ರಯೋಗದಲ್ಲಿ ಬರೀ ಮೂರೇ ಜನ ನಟರು ಪ್ರೇಕ್ಷಕರನ್ನು ಹಿಡಿದಿಟ್ಟರೆ ಇಲ್ಲಿ ಇಡೀ ನಟಸಮೂಹವೇ ಅಭಿನಯಿಸಿದರೂ ಪ್ರಯೋಗ ಮನಮುಟ್ಟದೇಹೋಯಿತು.

ಆದಾಗ್ಯೂ ತುಂಬಾ ಹುರುಪಿನಿಂದ, ಆಸಕ್ತಿಯಿಂದ, ಕ್ರಿಯಾಶೀಲವಾಗಿ ನಿರಂತರ ಹೊಸಹೊಸ ಪ್ರಯೋಗಗಳನ್ನು ಮಾಡುತ್ತಾ ಬರುತ್ತಿರುವ ಸಂಚಾರೀ ತಂಡದ ಪ್ರಯತ್ನ ಹೀಗೇ ಮುಂದುವರೆಯಲಿ.

Sanchari’s N Mangala explores new terrains in Kannada theatre with Heegeradu Kathegalu..

 

 

 

 

 

 

Prathibha Nandakumar

     Let me begin with two excerpts: “In modern Kannada drama, especially in its formative phase between 1880 and 1920, all plays were invariably focused around issues of widowhood, remarriage, child marriage, dowry and women’s education; the general agenda was to enable women to have equal rights in society. But on the question of women participation in theatre, one finds a strange ambivalence as well as an anxiety. It is also interesting to note that the same strata of society which was advocating women’s rights in their plays was most prone to this anxiety…. There were several traditional forms of theatre where women took part much before the advent of modernity, and they continued to do so without any anxiety even subsequently.”

..from K V Akshara’s essay Reversal of Roles.

“In the early 20th century, the conservative section of theatre-goers opined that many an evidence revealed that a man would portray the woman’s role with an ease and emphasis that could hardly be achieved by the self-conscious actress. They said that only morally loose women with their single qualification of musical accomplishments volunteered to the stage to render it impure with their bad ways, and that it was an irony that such women, morally  so low, portrayed the great roles of Sita and Chandramati.….”

 Following this, many great women etched their names in the history of modern Kannada theatre. “K Aswathamma (Bharata Janollasini Sabha and later, Gubbi Company) Tripuramba (Gubbi Company), Lahshmibai (Sahitya Samrajya Nataka Mandali), M V Rajamma (Chandrakala Nataka Mandali of Peer ), B. Jayamma (Gubbi Company), Gangubai Guledgudd (Viswa Gunadarsha Mandali of Vamanarao Master), Ballari Lalita (Mitramandali of Hirannayya), Sundaramma (Chamundeshwari Company) added grace and charm to the professional stage by their exquisite performances. Apart from the women’s troupes such as Lakshmeshwar (Stree Nataka Mandali) actresses like Gangubai Ouledgudda of North Karnataka, Nanjasani of Bangalore and Kamalamma and Lakshmasani of Mysore founded and led their own professional troupes.”

..from a write-up about Women in Kannada Theatre.

 So with such a proud heritage, it is not surprising that several women have proved their mettle in Kannada theatre as actors, directors and technicians. After Prema Karanth, B Jayashree, S Malathi, Champa Shetty and many others, now N Mangala is making news with her troupe in Sanchari.

 Armed with an MA in Literature and training under the legendary B V Karanth, N Mangala worked at Ranagayana repertory theatre for 15 years. Mangala worked as costume designer, theatre instructor and technician, before launching her own troupe Sanchari in 2004.

“I think women have ‘arrived’ on the Kannada theatre scene both as directors and actors. Thanks to our predecessors, we did not have to struggle with experiments. I started with performing H S Venkatesh Murthy’s play Urmila, a monologue. It was received very well. Later on, after attending a theatre work shop organised by the Nataka Academy for women playwrights, co-ordinated by K R Nagaraj and C Basavalingaiah, I wrote and directed Dhareyolagina Rajakarana, based on Kumaravyasa Bharatha and soon followed it up with Arahantha (written by S Ramanatha) a play propagating anti-war ideology. Both were received very well.

Then came Kamalamani Comedy Kalyana, Narigaligeke Kodilla and Vanity Bag.

“I then adapted short story writer Vasudendhra’s story Sridevi Mahathme, which happens at an apartment. It talks about how people see an incident in different angles based on their pre-conceived notions. I was attracted by the thought of how to present the first person, second person and third person narratives in a written story on the stage and how to bring in different acting styles, presentation and expressions. I tried adapting it and the result was good. It was then I read Jayanth Kaikini’s story No Present Please which again captures the undercurrents of how young minds differ in thinking. I thought it would make a good play and had it dramatised. I clubbed it together and titled it as Heegeradu Kathegalu. It will be staged at Ranga Shankara on May 26.”

“Though Kannada theatre offers abundant opportunities for actors and directors, it is all amateur and there is hardly any revenue. I know only theatre and it’s my livelihood. After coming from Rangayana, I started working as costume designer and technician because it earned me some money. My idea to start Sanchari evolved when I thought why not start my own company instead of working for others? Also now the concept of acting has undergone tremendous change. Now the actors go to TV, films and also do stage shows. Some work in institutions and come only in their free time.”

Kannada theatre, she says, is not strong enough to sustain on its own. “There is no revenue. Whatever we earn has to be put back into theatre. In such a closed situation to get caught in a web of age old styles and expressions is a tragedy. I believe in experimenting and always welcome new ideas. We also have the two ‘monsters’ – films and CD – encroaching into our territory.

Here if you don’t perform, no one will ask you why not. However, if you do perform, they question why this? In every field the experiments are so abundant that the new voices are hardly heard. The younger generation has to fight to make a mark. I was  very particular that I should bring in new content and styles when I started Sanchari. I never wanted to ‘hang by the old tree of tradition’. I am not aiming to make landslide victories or etch milestones. I am just trying to register a small voice that will eventually become loud enough to be heard.”

 I was particular that I should bring in new content when I started Sanchari.

Link- http://www.bangaloremirror.com/index.aspx?page=article&sectid=31&contentid=2012052520120525202149222a42d6bf5

         ನಾಟಕ ಬೆಂಗ್ಳೂರು-೨೦೧೧ ರ ರಂಗಸಂಭ್ರಮ!

 ಸಂಚಾರಿ ಥಿಯೇಟರ್

ವಸುಧೇಂದ್ರ ಮತ್ತು ಜಯಂತ ಕಾಯ್ಕಿಣಿ ಅವರ ಕತೆಗಳ ರಂಗರೂಪ

“ಹೀಗೆರಡು ಕತೆಗಳು”

(ಶ್ರೀದೇವಿ ಮಹಾತ್ಮೆ ಮತ್ತು ನೋ ಪ್ರೆಸೆಂಟ್ಸ್ ಪ್ಲೀಸ್)

15 ಡಿಸೆಂಬರ್ 2011

ಸಂಜೆ 7:30 ಕ್ಕೆ

ರಂಗಶಂಕರ

ನೀವು ಬನ್ನಿ, ಗೆಳೆಯರನ್ನು ಕರೆತನ್ನಿ!

This slideshow requires JavaScript.

‘ನೊ ಪ್ರೆಸೆಂಟ್ಸ್ ಪ್ಲೀಸ್’ ಕತೆಯ ಲೇಖಕ

ಜಯಂತ ಕಾಯ್ಕಿಣಿ ಅವರು ರಿಹರ್ಸಲ್ ನಂತರದ ಮಾತುಕತೆಯಲ್ಲಿ.

ಈ ಸಲದ ನಾಟಕ ಬೆಂಗ್ಳೂರು ರಂಗಸಂಭ್ರಮದಲ್ಲಿ ಸಂಚಾರಿ ಥಿಯೇಟರ್ ಎರಡು ಕತೆಗಳನ್ನು ಆಧರಿಸಿದ  ರಂಗರೂಪ “ಹೀಗೆರಡು ಕತೆಗಳು” ಎಂಬ  ನಾಟಕವನ್ನು ಕೈಗೆತ್ತಿಕೊಂಡಿದೆ. ಈ ನಾಟಕಕ್ಕೆ ಶಶಿಧರ ಅಡಪ ಅವರ ರಂಗವಿನ್ಯಾಸವಿದೆ. ಬೆಳಕು ವಿನ್ಯಾಸವನ್ನು ಮುಸ್ತಾಫ, ವಸ್ತ್ರವಿನ್ಯಾಸವನ್ನು ಸುರಭಿ ಮತ್ತು ಪ್ರಚಾರ ಕಾರ್ಯವನ್ನು ಚಂದ್ರಕೀರ್ತಿ ನಿರ್ವಹಿಸಿದ್ದಾರೆ. ಸಂಗೀತ ನಿರ್ದೇಶನ ಗಜಾನನ.ಟಿ.ನಾಯ್ಕ ಅವರದ್ದು. ಕಲಾವಿದರು ವಿಜಯ್, ಸುರಭಿ, ಚಂದ್ರಕೀರ್ತಿ, ಗಣಪ, ಸೌಮ್ಯ, ನಿಶಾ ಮತ್ತು ನಾಗರಾಜ. ನಿರ್ದೇಶನ ಎನ್.ಮಂಗಳಾ.

ಹೀಗೆರಡು ಕತೆಗಳು :

ಕನ್ನಡ  ಸಾಹಿತ್ಯ ಕ್ಷೇತ್ರದ ಇವತ್ತಿನ ಬಹು ಮುಖ್ಯ ಕತೆಗಾರರಾಗಿರುವ ವಸುಧೇಂದ್ರ ಮತ್ತು  ಜಯಂತ ಕಾಯ್ಕಿಣಿ ಅವರ ಕತೆಗಳನ್ನು (ಶ್ರೀದೇವಿ ಮಹಾತ್ಮೆ ಮತ್ತು ನೊ ಪ್ರೆಸೆಂಟ್ಸ್ ಪ್ಲೀಸ್ )ಒಟ್ಟಿಗೆ ರಂಗದ ಮೇಲೆ ತರುವ ಪ್ರಯತ್ನವೇ “ಹೀಗೆರಡು ಕತೆಗಳು” ಎಂಬ ನಾಟಕ.

ಓಟದ ಬದುಕಿಗೆ ಹೆಸರಾಗಿರುವ ಬೆಂಗಳೂರಿನ ಅಪಾರ್ಟಮೆಂಟ್ ಒಂದರಲ್ಲಿ ಮತ್ತು ಬಾಂಬೆ ಟ್ರಾಫಿಕ್ ತುಂಬಿದ ಅಭಿವೃದ್ಧಿಯ ದಾರಿಯಲ್ಲಿರುವ ರಸ್ತೆಗಳ ನಡುವೆ ಮತ್ತು  ಭರ್ತಿ ಜನರಿಂದ ತುಂಬಿ ತುಳುಕುವ ರೈಲ್ವೆ ಸ್ಟೇಷನ್ ನಲ್ಲಿ ನಡೆಯುವ ಈ ಕತೆಗಳು ಎರಡು ಬೇರೆ ಬೇರೆ ನೆಲೆಗಳಲ್ಲಿ ಭಿನ್ನ ಕಥಾವಸ್ತುವನ್ನು ಹೇಳುವುದರ ಮೂಲಕ ಅವುಗಳ ಸಾಮ್ಯತೆಯನ್ನು ಗುರುತಿಸಿಕೊಳ್ಳುತ್ತಾ ಇವತ್ತಿನ ವಾಸ್ತವದ ಸಂಗತಿಗಳನ್ನು ಎದುರುಗೊಳ್ಳುವ ಪ್ರಯತ್ನ ಇಲ್ಲಿದೆ. ಬದುಕಿನ ಕೆಲವು ಗೊಂದಲಗಳು, ಬದುಕಿನ ಸತ್ಯಗಳು, ಬದುಕನ್ನು ಎದುರುಗೊಳ್ಳುವ ಬೇರೆ ಬೇರೆ ಸನ್ನಿವೇಶಗಳು ಮತ್ತು ಅದನ್ನು ಅರ್ಥೈಸಿಕೊಳ್ಳುವ ಪರಿಯ ಮೂಲಕ ಇವತ್ತು ನಾವು ಬದುಕುತ್ತಿರುವ ಬದುಕನ್ನು ಗ್ರಹಿಸುವ ಪಯಣ ಇದು. ಯುವ ಮನಸ್ಸುಗಳ ಮದುವೆ, ಕನಸು, ಕೆಲಸ, ಹೆಸರು,ವ್ಯಕ್ತಿತ್ವ, ಜಾತಿ, ನಿಯಮ, ಆದರ್ಶ, ಓಟದ ಬದುಕಿನ ನಗರಗಳು, ಆಧುನಿಕ ಬದುಕಿನ ರೀತಿ – ಈ ಎಲ್ಲವುಗಳ ಬಿಡಿ ಬಿಡಿ ಚಿತ್ರಣಗಳನ್ನುನೀಡುವುದರ ಮೂಲಕ ಕತೆ ಹೇಳುತ್ತದೆ “ಹೀಗೆರಡು ಕತೆಗಳು” ನಾಟಕ.