Category: ಮಕ್ಕಳ ರಂಗ ಶಿಬಿರ


a7f183b1-dee3-4ad3-8493-4c00cc2677c1

This slideshow requires JavaScript.

ಸಂಚಾರಿ ಥಿಯೇಟರ್ ಪ್ರತಿವರ್ಷ ಹಮ್ಮಿಕೊಳ್ಳುವ ಮಕ್ಕಳ ಬೇಸಿಗೆ ರಂಗಶಿಬಿರದಲ್ಲಿ ಈ ವರ್ಷ ಕೆ.ರಾಮಯ್ಯ ಅವರ ಒಗಟಿನ ರಾಣಿ ನಾಟಕವನ್ನು ಆಯ್ದುಕೊಂಡಿದೆ.ಕೆ.ರಾಮಯ್ಯ ಅವರು ಪಾಶ್ಚಾತ್ಯ ಮಾದರಿಗಳಿಗೆ ಪರ್ಯಾಯವಾಗಿ ನಮ್ಮ ನೆಲದ ಕತೆಗಳನ್ನು ಹೆಣೆದವರು. ನಮ್ಮ ನೆಲದ ಪರಂಪರೆಯ ಜೊತೆ ಮಕ್ಕಳನ್ನು ಮುಖಾಮುಖಿಯಾಗಿಸಲು ಯಾವಾಗಲೂ ಹಾತೊರೆಯುವವರು. ಅದಕ್ಕಾಗಿಯೇ ರಚಿಸಿದಂತಹ “ಒಗಟಿನ ರಾಣಿ” ಯನ್ನು ನಾವು ಇವತ್ತಿನ ಮಕ್ಕಳಿಗೆ ಅಗತ್ಯವಾಗಿ ತಲುಪಿಸಬೇಕಾದ ಜರೂರತ್ತು ಇರುವ ಕಾರಣ ಮಕ್ಕಳಿಂದ ಈ ನಾಟಕವನ್ನು ಅಭಿನಯಿಸುವಂತೆ ಮಾಡಿದ್ದೇವೆ. ಇಲ್ಲಿ ಕಲ್ಪನೆ ಇದೆ. ಅನುಭವ ಇದೆ, ಹಾಡಿದೆ; ಕುಣಿತ ಇದೆ; ಜೊತೆಗೆ ಸವಾಲು ಇದೆ. ಈ ಮಕ್ಕಳ ನಾಟಕಕ್ಕೆ ಸಾಕ್ಷಿಯಾಗಲು ನಮ್ಮ ಜೊತೆ ರಂಗಕರ್ಮಿ ಸಿ.ಕೆ .ಗುಂಡಣ್ಣ ಅವರು ಇದ್ದು ಮಕ್ಕಳನ್ನು ಹರಸುತ್ತಾರೆ. ಮೇ 3 ರಂದು ಸಂಜೆ 6.30 ಕ್ಕೆ ಸರಿಯಾಗಿ ಕೆ.ಹೆಚ್.ಕಲಾಸೌಧದಲ್ಲಿ. ಬನ್ನಿ ನಮ್ಮ ಜೊತೆಗೂಡಿ.

invitation

poster fyn