ಸಂಚಾರಿ ಥಿಯೇಟರ್
ಈ ಸಲ ಬೇಸಿಗೆಯಲ್ಲ ವಸತಿ ಸಹಿತ(Residential) ಮಕ್ಕಳ ಬೇಸಿಗೆ ರಂಗಶಿಬಿರವನ್ನು ಏಪ್ರಿಲ್ 15 ರಿಂದ 30 ರ ವರೆಗೆ
ರಾಮನಗರದ , ಜಾನಪದ ಲೋಕದಲ್ಲಿ, ಗಜಾನನ .ಟಿ. ನಾಯ್ಕ ಅವರ ನೇತೃತ್ವದಲ್ಲಿ  ಕರ್ನಾಟಕ ಜಾನಪದ ಪರಿಷತ್ ಸಹಯೋಗದಲ್ಲಿ, ಕರ್ನಾಟಕ ಜಾನಪದ ಅಕಾಡೆಮಿ ಸಹಕಾರದೊಂದಿಗೆ ಆಯೋಜಿಸಿದೆ.
R2

ವಸತಿ ಸಹಿತ ಮಕ್ಕಳ ಶಿಬಿರ -ರಾಮನಗರದ ಜಾನಪದ ಲೋಕದಲ್ಲಿ
ಸಂಚಾರಿ ಥಿಯೇಟರ್ ಪ್ರತಿವರ್ಷ ಮಕ್ಕಳಿಗಾಗಿ “ವಾರಾಂತ್ಯ ರಂಗಭೂಮಿ” ಮತ್ತು “ಬೇಸಿಗೆಯಲ್ಲಿ ಮಕ್ಕಳ ಬೇಸಿಗೆ ಶಿಬಿರ” ಗಳನ್ನು ನಡೆಸುತ್ತಾ ಬಂದಿದೆ. ಆದರೆ ಈ ಬಾರಿ ಮಕ್ಕಳಿಗೆ ಮತ್ತೊಂದು ಹೊಸ ಅನುಭವವನ್ನು ನೀಡುವ ಉದ್ದೇಶ ದಿಂದ ಮತ್ತು ಪೋಷಕರ ಒತ್ತಾಸೆಯಿಂದ “ವಸತಿ ಸಹಿತ ಮಕ್ಕಳ ಬೇಸಿಗೆ ಶಿಬಿರ”ವನ್ನು ಹಮ್ಮಿಕೊಂಡಿದೆ.
ಈ ಶಿಬಿರ ಯಾವಾಗಲೂ ಇರುವಂತೆ ಹಾಡು, ನೃತ್ಯ, ಮೋಜು, ಚಿತ್ರ, ಬಣ್ಣ, ನಾಟಕ ಅಷ್ಟೇ ಆಗಿರದೆ ಅದರ ಜೊತೆಯಲ್ಲಿ ಮಗು ನಿತ್ಯ ತಾನು ತೊಡಗಿಸಿಕೊಳ್ಳುವ ದಿನಚರಿಯ ಎಲ್ಲ ಚಟುವಟಿಕೆಗಳನ್ನು ತಾನೇ ಸಂತೋಷದಿಂದ ನಿಭಾಯಿಸುವ ಹಾಗೆ ಮತ್ತು ದಿನ ನಿತ್ಯದ ಎಲ್ಲ ಕೆಲಸಗಳನ್ನು ಸಂಭ್ರಮಿಸುವ ಹಾಗೆ ಕಾರ್ಯಕ್ರಮಗಳನ್ನು, ಅಭ್ಯಾಸಗಳನ್ನು ರೂಪಿಸಿರಲಾಗುತ್ತದೆ. ಈ ಮೂಲಕ ಬಗು ಬದುಕಿನ ಎಲ್ಲ ಆಗುಹೋಗುಗಳನ್ನು ಸಂತೋಷದಿಂದ ಸ್ವೀಕರಿಸುವ ಮನೋಧೋರಣೆಯನ್ನು ಹೊಂದಲಿ ಎಂಬುದು ನಮ್ಮ ಆಶಯ.

ಇದರ ಜೊತೆಗೆ ಜಾನಪದ ನೃತ್ಯ ಪ್ರಕಾರಗಳ ಪರಿಚಯ ಆಗುತ್ತದೆ. ಚಿತ್ರ ಕಲೆಗ ಸಂಬಂಧ ಪಟ್ಟಂತೆ ಅಭ್ಯಾಸಗಳಿರುತ್ತವೆ. ಮಣ್ಣಿನೊಡನೆ ಆಟ, ಬಣ್ಣದೊಡನೆ ಆಟ, ರಂಗಾಟಗಳಿರುತ್ತವೆ. ಸಣ್ಣ ಪ್ರವಾಸ, ಬೆಟ್ಟ ಹತ್ತುವ ಆಟ,ಹಳ್ಳಿಗೆ ಭೇಟಿ, ಹಸಿರು ತುಂಬಿರುವ ಆವರಣದ ತೊಟ್ಟಿ ಮನೆಯ ವಾಸ, ಬಹಳಷ್ಟು ಮರೆತೇ ಹೋಗಿಬಿಟ್ಟಿರುವ ನಮ್ಮದೇ ದೇಸೀ ಸಂಪ್ರದಾಯದ ಹಲವು ಅನುಭವಗಳನ್ನು ನೆನಪಿಸಿಕೊಳ್ಳುವಂತಹ ಒಂದಷ್ಟು ಕಾರ್ಯಕ್ರಮಗಳು ಯೋಜಿಸಲ್ಪಟ್ಟಿರುತ್ತವೆ. ನಗರದ ಬದುಕಿಗೆ ತೆರೆದುಕೊಂಡಿರುವ ಇಂದಿನ ಮಕ್ಕಳಿಗೆ ನಗರದಲ್ಲಿ ಸುಲಭಕ್ಕೆ ಸಿಗಲಾರದ ಹಲವು ಅನುಭವಗಳಿಗೆ ಅವರನ್ನು ತೆರೆದಿಡುವುದಷ್ಟೇ ನಮ್ಮ ಆಶಯ. ಅಂತಿಮವಾಗಿ ಒಂದು ಪ್ರದರ್ಶನವಿರುತ್ತದೆ. ಅದಕ್ಕೂ ಬಹು ಮುಖ್ಯವಾಗಿ ಶಿಬಿರ ಮುಗಿಸಿ ಹೊರಡುವ ಮುನ್ನ ಅವರಿಗೆ ಕೊಂಡೊಯ್ಯಲು ಒಂದು ನೆನಪಿನ ಬುತ್ತಿಯ ಬಾಗಿನ ಕಟ್ಟಲ್ಪಟ್ಟಿರುತ್ತದೆ.

Advertisements