‘ಹೀಗೆರಡು ಕತೆಗಳು’ ಕನ್ನಡದ ಪ್ರಮುಖ ಕಥೆಗಾರರಾದ ವಸುಧೇಂದ್ರ ಮತ್ತು ಜಯಂತ್ ಕಾಯ್ಕಿಣಿ ಅವರ ಶ್ರೀದೇವಿ ಮಹಾತ್ಮೆ ಹಾಗೂ ನೋ ಪ್ರೆಸೆಂಟ್ಸ್ ಪ್ಲೀಸ್ ಕತೆಗಳನ್ನು ಆಧರಿಸಿದೆ. ಓಟದ ಬದುಕಿಗೆ ಹೆಸರಾಗಿರುವ ಬೆಂಗಳೂರಿನ ಅಪಾರ್ಟ್ ಮೆಂಟ್ ನಲ್ಲಿ ಮತ್ತು ಮುಂಬೈನ ಟ್ರಾಫಿಕ್ ತುಂಬಿದ ರಸ್ತೆಗಳ್ ನಡುವೆ ಭರ್ತಿ ಜನರಿಂದ ತುಂಬಿ ತುಳುಕುವ ರೈಲ್ವೆ ಸ್ಟೇಷನ್ನಿನಲ್ಲಿ ನಡೆಯುವ ಈ ಕತೆಗಳು ಎರಡು ಬೇರೆ ಬೇರೆ ನೆಲೆಗಳಲ್ಲಿ ಭಿನ್ನ ಕಥಾವಸ್ತುವನ್ನು ಹೇಳುತ್ತಲೇ ಸಾಮ್ಯತೆ ಹೊಂದಿರುವುದನ್ನು ನಾಟಕ ತೋರಿಸಲು ಯತ್ನಿಸುತ್ತದೆ. ಬದುಕನ್ನು ಎದುರುಗೊಳ್ಳುವ ಬೇರೆ ಬೇರೆ ಸನ್ನಿವೇಶಗಳು ಮತ್ತು ಅದನ್ನು ಅರ್ಥೈಸಿಕೊಳ್ಳುವ ಮೂಲಕ್ ಜೀವನವನ್ನು ಗ್ರಹಿಸುವ ಪರಿ ಇದು. ಯುವ ಜನರ ಮದುವೆ ಕನಸು, ಕೆಲಸ, ಹೆಸರು, ಜಾತಿ, ನಿಯಮ, ಆದರ್ಶ ನಗರಜೀವನದ ಓಟ ಈ ಎಲ್ಲವುಗಳ ಬಿಡಿ ಬಿಡಿ ಚಿತ್ರಣ ನೀಡುವ ಮೂಲಕ ಈ ಕತೆ ಸಾಗುತ್ತದೆ.13 A Higeradu kategalu

Advertisements