ಹಿಂದೆಲ್ಲ ಬೇಸಿಗೆ ರಜೆ ಬಂದರೆ ಸಾಕು ಮಕ್ಕಳು ಅಜ್ಜಿ ಮನೆಗೆ ಓಡುತ್ತಿದ್ದರು.ಮನೆಯೊಳಗೆ ಎಷ್ಟೊಂದು ಮಕ್ಕಳು! ರಾತ್ರಿ ಊಟ ಹಿತ್ತಲಲ್ಲೋ, ಅಂಗಳದಲ್ಲೋ, ಪಡಸಾಲೆಯಲ್ಲೋ,ಚಾವಡಿಯಲ್ಲೋ ತಣ್ಣಗೆ ಗಾಳಿ ಬೀಸುವ ಹೊತ್ತು ಎಲ್ಲ ಮಕ್ಕಳನ್ನು ವೃತ್ತದಲ್ಲಿ ಕೂಡಿಸಿಕೊಂಡು ಯಾರಾದರೊಬ್ಬರು ಹಿರಿಯರು ಕೈ ತುತ್ತು ಹಾಕುತ್ತಿದ್ದರು.ಅಂಥಹ ದಿನಗಳು, ಇತ್ತೀಚೆಗೆ ಸ್ವಲ್ಪ ಕಷ್ಟವೆಂದೇ ಹೇಳಬೇಕು. ಆದರೂ ಕೆಲವು ಕಡೆ ಎಲ್ಲ ಮಕ್ಕಳೂ ಸೇರಿದಾಗ ಕೈ ತುತ್ತು ಊಟ ನೀಡುವ ಬಳಕೆಯುಂಟು. ಅದಕ್ಕಾಗಿಯೇ ನಮ್ಮಅಂಗಳದಲ್ಲೂ ನಮ್ಮ ಮಕ್ಕಳಿಗೆ ಕೈ ತುತ್ತು ನೀಡುವ ಹಂಬಲ ನಮಗೆ. ಆಲೂಗಡ್ಡೆ ಈರುಳ್ಳಿ ಹುಳಿಯನ್ನ ಮತ್ತು ಮೊಸರನ್ನದ ಕೈ ತುತ್ತು ಊಟ! ಪಾತ್ರೆ ಖಾಲಿ!

Advertisements