ಉಪೇಂದ್ರ ರಾಘವೇಂದ್ರ ನೀನಾಸಂ ಸಂಸ್ಥೆಯಲ್ಲಿ ನಾಟಕ ಕಲಿತು ನೀನಾಸಂ ತಿರುಗಾಟದಲ್ಲಿ ಭಾಗವಹಿಸಿದ್ದಾರೆ.ಕೇರಳದಲ್ಲಿ ಅಲ್ಲಿನ ರಂಗಪ್ರಕಾರಗಳನ್ನು ಅಭ್ಯಾಸ ಮಾಡುತ್ತಿದ್ದಾರೆ. ಸೂತ್ರದ ಗೊಂಬೆಯಾಟವನ್ನು ರಂಗನಾಥ ಅವರಿಂದ ಕಲಿತಿದ್ದಾರೆ. Acting methodology in traditional art form “ottan thullal” ಎಂಬ ವಿಷಯದ ಬಗ್ಗೆ Phd ಮಾಡುತ್ತಿದ್ದಾರೆ. ಇಂಥ ಪ್ರತಿಭಾವಂತರು ನಮ್ಮ ಅಂಗಳಕ್ಕೆ ಬಂದದ್ದು ನಮ್ಮ ಮಕ್ಕಳ ಸೌಭಾಗ್ಯ.

ಬೊಂಬೆಯಾಟ ಎಂಬ ಪ್ರಕಾರ ನಮ್ಮ ದೇಶದಲ್ಲಿ ಯಾವ ಯಾವ ರಾಜ್ಯಗಳಲ್ಲಿದೆ ಎಂಬುದನ್ನು ಹೇಳುತ್ತಾ ಅವುಗಳ ಚಿತ್ರಗಳನ್ನು ತೋರಿಸಿದರು. ಬೇರೆ ಬೇರೆ ರಾಜ್ಯಗಳ ತೊಗಲುಗೊಂಬೆಗಳನ್ನು ಮಕ್ಕಳಿಗೆ ತೋರಿಸಿದರು.ಇಂಡೊನೇಷಿಯಾ ದೇಶದ ತೊಗಲುಗೊಂಬೆ ಮಾಡಿರುವ ರೀತಿಯನ್ನು ಅರ್ಥ ಮಾಡಿಸಿದರು. ಮಕ್ಕಳಿಂದ ಅವನ್ನು ಮುಟ್ಟಿಸಿದರು. ಮಕ್ಕಳಿಗಂತು ಸಂತೋಷವೋ ಸಂತೋಷ!

ನಂತರ ಬೊಂಬೆಯಾಟದ ಕೆಲವು ದೃಶ್ಯಗಳನ್ನು ತೋರಿಸಿದರು. ಅಷ್ಟೇ ಅಲ್ಲದೆ ಮಕ್ಕಳೇ ಬೊಂಬೆಯಾಟ ಆಡಿಸಬೇಕಾದರೆ ಅವರು ಸಿದ್ಧರಾಗುವ ಬಗೆಯನ್ನು ಹೇಳಿಕೊಟ್ಟರು. ಆಡಿಸುವವರದ್ದು ಒಂದು ಗುಂಪು, ಮಾತು ಆಡುವವರದ್ದು ಒಂದು ಗುಂಪು ಸಿದ್ಧರಾಗುವ ಬಗೆಯನ್ನು ತಿಳಿಸಿ ಹೇಳಿದರಲ್ಲದೆ ಮಕ್ಕಳಿಂದ ಬೊಂಬೆಯನ್ನು ಆಡಿಸಿದರು.

Advertisements