ಮಾಲತಿ.ಪಿ.ಎಸ್ ವಿದ್ಯಾಭ್ಯಾಸ ಮಾಡಿರುವುದು ವಿಜ್ಞಾನದ ವಿಷಯಗಳಾದರೂ ಸಾಧನೆ ಮಾಡಿರುವುದು ಯೋಗದಲ್ಲಿ ಮತ್ತು ಚಿತ್ರಕಲೆಯಲ್ಲಿ. ಚಿತ್ರಕಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುವ ಮಾಲತಿಯವರು ನಮ್ಮ ಮಕ್ಕಳಿಗೆ ಸಂತೋಷದಿಂದ ಯೋಗ ಕಲಿಸಲು ಆಗಮಿಸಿದ್ದರು. ಸೂರ್ಯನಮಸ್ಕಾರದ ವಿವಿಧ ಆಸನಗಳನ್ನು ಪರಿಚಯಿಸಿದ ಅವರು ಮಕ್ಕಳು ಜಿಗ್ಜಾಗ್ ಆಗಿ ಚಲಿಸುವ ಆಟವೊಂದನ್ನು ಆಡಿಸಿ, ನಂತರ ಯೋಗದ ಶ್ಲೋಕವೊಂದನ್ನು ಹೇಳಿಕೊಟ್ಟರು.

ಓಂ ಯೋಗೇನ ಚಿತ್ತಸ್ಯ ಪದೇನ ವಾಚಾಂ

ಮಲಂ ಶರೀರಸ್ಯ ವೈದ್ಯಕೇನ

ಲೋಪಾಕರೋಕ್ತ ಪ್ರವರಂ ಮುನೀನಾಂ

ಪತಂಜಲಿ ಪ್ರಾಂಜಲಿ ರಾನತೋಸ್ಮಿ.

ಹರಿಃ ಓಂ