ಮಕ್ಕಳಿಗೆ ಹಕ್ಕಿಗಳ ಬಗ್ಗೆ ತಿಳಿಸಿ ಹೇಳುವ ಚಿಕ್ಕ ಚಿಕ್ಕ ಸಿನಿಮಾಗಳನ್ನು ತೋರಿಸಲಾಯಿತು. ಮೈಸೂರಿನ ‘MAN’ ಸಂಸ್ಥೆಯ ಮನು ಅವರು ಬಂದು ಹಕ್ಕಿಗಳ ಜೀವನದ ಬಗ್ಗೆ ಅವು ತಮ್ಮ ಊಟ ಹುಡುಕಿಕೊಳ್ಳುವ ಬಗ್ಗೆ, ಅವು ಗೂಡು ಕಟ್ಟಿಕೊಂಡು ಸಿಂಗರಿಸಿಕೊಳ್ಳುವುದರ ಬಗ್ಗೆ, ಒಂದು ಊರಿನಿಂದ ಮತ್ತೊಂದು ಊರಿಗೆ ವಲಸೆ ಹೋಗುವ ರೀತಿಯ ಬಗ್ಗೆ ಇರುವಂತಹ ಹಲವು ಸಿನಿಮಾಗಳನ್ನು ತೋರಿಸಿದರು. ಅವುಗಳ ರೀತಿ ನೀತಿಗಳ ಬಗ್ಗೆ ಮಾಹಿತಿ ನೀಡಿದರು. ನಮ್ಮ ಮಕ್ಕಳೋ, ಕೂತು, ನಂತರ ನಿಧಾನ ನಿಧಾನವಾಗಿ ಹಾಗೆಯೇ ಜಾರಿಕೊಂಡು ಸೊಂಟ ನಿಲ್ಲದೆ ಮಲಗುತ್ತಾ, ಬಾರಲು ಬಿದ್ದು, ಹೊರಳಾಡುತ್ತಾ ಸಿನಿಮಾ ನೋಡಿ, ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದರು. ಕೊನೆಯದಾಗಿ ಮತ್ತೆ ಪ್ರಕ್ರುತಿಯೆಡೆಗೆ ಎಲ್ಲರೂ ಮರಳಬೇಕಾದ ಅವಶ್ಯಕತೆಯನ್ನು ಒತ್ತಿ ಹೇಳುತ್ತಾ ಅದನ್ನು ಅವರಿಗೆ ಅರ್ಥ ಮಾಡಿಸುವುದು ನಮ್ಮ ಉದ್ದೇಶವಾಗಿತ್ತು.

Advertisements