ಸಂಚಾರಿ ಅಂಗಳದಲ್ಲಿ ಇಂದು ಗಲಾಟೆಯೋ ಗಲಾಟೆ. ಮಕ್ಕಳು ತಮ್ಮನ್ನು ಹೇಗೆ ನಿಭಾಯಿಸಿಕೊಳ್ಳಬಲ್ಲರೆಂಬ ಒಂದು ಸಣ್ಣ ಸವಾಲು ಅವರಿಗೆ ನೀಡಲೆಂದು ಭಾನುವಾರದ ವಿಶೇಷವೆಂಬಂತೆ ಶ್ರೀ ಮಹಾಗಣಪತಿ ತಿಂಡಿಯ ಹಟ್ಟಿಯನ್ನು ತೆರೆಯಲಾಯಿತು. ಅಂಗಡಿಯೊಳಗೆ ಪ್ಯಾಕ್ ಮಾಡದೆ ಇರುವಂತಹ ನಮ್ಮ ನೆಲದ ತಿಂಡಿಗಳಾದ ಚಕ್ಕುಲಿ, ಕೋಡುಬಳೆ, ಶೇಂಗಾಯಿ, ಹುರಿಗಡಲೆ, ಬಟಾಣಿ, ಕಡಲೆ ಮಿಠಾಯಿ, ಎಳ್ಳುಂಡೆ, ಬಾಳೆಹಣ್ಣು, ಕಲ್ಲಂಗಡಿ ಹಣ್ಣು, ಸೌತೆಕಾಯಿ, ನೀರುಮಜ್ಜಿಗೆ, ಶುಂಠಿ ಪೆಪ್ಪರಮೆಂಟು, ಹುಣಿಸೆ ಪೆಪ್ಪರಮೆಂಟು ಮುಂತಾದವನ್ನು ಮಾರಲಾಯಿತು. ಅದಕ್ಕೆ ನಿಗದಿಸಿದ ಹಣ ಗರಿಷ್ಟ ಎಂದರೆ 5 ರೂ. ಮಾಲ್ ಗಳಲ್ಲಿ ಅಪ್ಪ ಅಮ್ಮಂದಿರ ಜೊತೆ ಶಾಪಿಂಗ್ ಮಾಡುವ ಮಕ್ಕಳು ಇಂದು ತಾವು ತಂದ ಚಿಲ್ಲರೆ ಕಾಸನ್ನು ಎಣಿಸಿ, ತೂಗಿ, ಜವಾಬ್ದಾರಿಯಿಂದ ಹೇಗೆ ಖರ್ಚು ಮಾಡಬೇಕು ಮತ್ತು ಯಾವುದಕ್ಕಾಗಿ ಖರ್ಚು ಮಾಡಬೇಕೆಂಬುದನ್ನು ಯೋಚಿಸಲಿ ಎಂಬ ಕಾರಣಕ್ಕೆ ನಾವು ಕೊಟ್ಟ ಸವಾಲನ್ನು ಸಂತೋಷದಿಂದ ಸ್ವೀಕರಿಸಿದರು.

Advertisements