ಎರಡನೇ ದಿನಕ್ಕೇ ಮಕ್ಕಳು ಹಳಬರಂತೆ ವರ್ತಿಸಲು ಪ್ರಾರಂಭಿಸಿದರು. ಗಜಾನನ ಅವರಿಂದ “ಇಸ್ಪೀಟ್ ರಾಜ್ಯ” ನಾಟಕದ ಹೊಸಹಾಡು ಕಲಿತರು.

ಗಣಪ ಅವರು ಕನ್ನಡ ಅಕ್ಷರಮಾಲೆಯನ್ನು ಇಟ್ಟುಕೊಂಡು ವಿವಿಧ ಭಾವಗಳನ್ನು ಅಭಿವ್ಯಕ್ತಿಸುವ, ಬೇರೆ ಬೇರೆ ಧ್ವನಿಗಳಿಂದ ಅರ್ಥ ಹೊರಡಿಸುವ ಒಂದು ಆಟ ಆಡಿಸಿದರು.

ತರಗತಿಯೊಳಗೆ ಧುತ್ತೆಂದು ಪೇಪರ್ ಬಿದ್ದ ಕ್ಷಣ ಮಕ್ಕಳೆಲ್ಲ ಕುತೂಹಲದಿಂದ ಅದರತ್ತ ನೋಡಿದರು. ಒಬ್ಬ ಹುಡುಗ ಆ ಪೇಪರ್ ಅನ್ನು ತೆಗೆದ. ಓದಲು ಹೇಳಿದ ಕ್ಷಣ ಓದಲಾರಂಭಿಸಿದ. ಅದು ‘ಬಾಲಸಂಚಾರಿ ವಾಣಿ’! ಮಕ್ಕಳ ಶಿಬಿರದ ನ್ಯೂಸ್ ಪೇಪರ್!

ಶಿವಕುಮಾರ್ ಮತ್ತು ಕಿರಣ್ ಮಕ್ಕಳಿಂದ ಚಿತ್ರ ಬಿಡಿಸಿದರು. ವಸ್ತುವೊಂದನ್ನು ಉಪಯೋಗಿಸಿಕೊಂಡು ಚಿತ್ರ ಬಿಡಿಸುವ ಹಾಗೆ ಹೇಳಿದರು.

ಇಡೀ ಶಿಬಿರದ ಮಕ್ಕಳಿಗೆ ಒಗ್ಗಟ್ಟಿನಿಂದ ಗುಂಪಿನಲ್ಲಿದ್ದರೆ ನಾವು ಹೇಗೆ ಶಕ್ತರಾಗಿರುತ್ತೇವೆ ಎಂಬುದನ್ನು ಅರ್ಥ ಮಾಡಿಸುವಂತಹ ಹಾವು-ಬಾಲದ ಆಟ, ಸರಪಳಿಯಾಟಗಳನ್ನು, ಜೊತೆಗೆ ಗಣಪ, ಶಿವಕುಮಾರ್, ಗಜಾನನ ಮತ್ತು ಕಿರಣ್ ಹಲವು ಆಟಗಳನ್ನು ಆಡಿಸಿದರು.

 

Advertisements