ರಂಗಭೂಮಿ ಉಳಿಯಬೇಕಾದರೆ ಅದು ಮಕ್ಕಳಿಂದಲೇ ಪ್ರಾರಂಭ ಆಗಬೇಕು. ಎಲ್ಲರೂ ಮಕ್ಕಳಾಗಬೇಕು. ಅದಕ್ಕೆಂದೇ ಸಂಚಾರಿ ಥಿಯೇಟರ್ ಬಿ.ವಿ.ಕಾರಂತ ಮತ್ತು ಪ್ರೇಮಾಕಾರಂತರ ನೆನಪಿನಲ್ಲಿ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ನಾಟಕವನ್ನು ಮಕ್ಕಳಿಂದ ಮಕ್ಕಳಿಗಾಗಿ ತಯಾರಿಸುವ ಯೋಜನೆಯೊಂದನ್ನು ರೂಪಿಸಿಕೊಂಡಿದೆ. ನಿತ್ಯದ ಶಾಲೆಯ ಒತ್ತಡದ ಮಧ್ಯೆ ಆಗಸ್ಟ್ ತಿಂಗಳಿಂದ ವಾರಕ್ಕೆರಡು ದಿನ (ಶನಿವಾರ ಮತ್ತು ಭಾನುವಾರ) ಆಟವಾಡುತ್ತಲೇ ನಾಟಕ ಕಟ್ಟುವ ಪ್ರಕ್ರಿಯೆಗೆ ಮಕ್ಕಳನ್ನು ಸಿದ್ಧಪಡಿಸುತ್ತಾ, ವೈದೇಹಿಯವರಝುಂ ಝಾಂ ಆನೆ ಮತ್ತು ಪುಟ್ಟಎಂಬ ನಾಟಕವೊಂದನ್ನು ತಯಾರಿಸಿ ಕೆ.ಹೆಚ್. ಕಲಾಸೌಧದಲ್ಲಿ ಪ್ರದರ್ಶನವನ್ನು ನೀಡಿತು.

      ಕಾರ್ಯಕ್ರಮದಲ್ಲಿ ಬಿ.ವಿ.ಕಾರಂತ ಮತ್ತು ಪ್ರೇಮಾಕಾರಂತರಿಗೆ ನುಡಿ ನಮನವನ್ನು ಕವಿ, ನಾಟಕಕಾರ ಡಾಹೆಚ್.ಎಸ್.ವೆಂಕಟೇಶಮೂರ್ತಿಯವರು ಸಲ್ಲಿಸಿದರು. ಚಿದಂಬರ ರಾವ್ ಜಂಬೆಯವರು ಉಪಸ್ಥಿತರಿದ್ದರು.ರಾಗ ನಮನವನ್ನು ಸಂಚಾರಿ ಥಿಯೇಟರ್ ಕಲಾವಿದರು ಸಲ್ಲಿಸಿದರು ಮತ್ತು ದೃಶ್ಯ ನಮನವನ್ನು ಸಂಚಾರಿ ಥಿಯೇಟರ್ ಮಕ್ಕಳು ನಾಟಕದ ಮೂಲಕ ಅರ್ಪಿಸಿದರು.

Photography – Karthik V N

Advertisements