ಪೂರ್ವರಂಗದ ಮುಕ್ತಾಯದ ಈ ಹೊತ್ತಿನಲ್ಲಿ ಕೆ .ವಿ .ಸುಬ್ಬಣ್ಣ ಅವರಿಂದ ಕನ್ನಡಕ್ಕೆ ಬಂದಿರುವ ಸಂಸ್ಕೃತ ನಾಟಕ ಭಗವದಜ್ಜುಕೀಯ ವನ್ನು ರಂಗದ ಮೇಲೆ ತರುವ ಪ್ರಯತ್ನವನ್ನು ಮಾಡಲಾಗಿದೆ . ಭಗವದಜ್ಜುಕೀಯ ಒಂದು ಪ್ರಹಸನ . ಇದರಲ್ಲಿ ಕುತೂಹಲಕಾರಿಯದ ಕಥಾಸಂವಿಧಾನ ಕ್ರಿಯೆಗಳಿವೆ . ಈ ಕಾರಣಗಳಿಗಾಗಿ ಇದನ್ನು ವಿಶಿಷ್ಟ ಸನ್ನಿವೇಶ ಕಾರಣವಾಗಿ ರೂಪಗೊಂಡ “ವೈನೋದಿಕ :”ಎನ್ನಬಹುದು . ಮೊಟ್ಟ ಮೊದಲ ಬಾರಿಗೆ ತೆರೆದುಕೊಳ್ಳುತಿರುವ ಈ ಗುಂಪಿಗೆ ಈ ನಾಟಕ ಒಂದು ಒಳ್ಳೆಯ ಅಭ್ಯಾಸವಾಗಬಹುದೆಂಬ ಕಾರಣಕ್ಕಾಗಿ ಆಯ್ಕೆ ಮಾಡಲಾಗಿದೆ. ಈ ನಾಟಕದ ಮೂಲಕ ಸಂಚಾರಿ ಥಿಯೇಟರ್ 2013ರಲ್ಲಿ ಮತ್ತೊಂದು ಹೊಸ ಗುಂಪನ್ನು ಕನ್ನಡ ರಂಗಭೂಮಿಗೆ ಪರಿಚಯಿಸುತ್ತಿದೆ.

Advertisements