ಕಿರಣ್.ಟಿ.ಸಿ

ಕಿರಣ್.ಟಿ.ಸಿ

ಕಿರಣ್.ಟಿ.ಸಿ : ಕಿರಣ್ ಅವರು ಚಿಕ್ಕಮಗಳೂರು ಜಿಲ್ಲೆಯ ಕಡೂರಿನವರು. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ವಿ.ಎ ನಲ್ಲಿ ಪದವಿ ಪಡೆದಿದ್ದಾರೆ. ಹಲವು ಕಡೆ ಅತಿಥಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಜೊತೆಗೆ ರಂಗಭೂಮಿಯ ನಂಟು ಮತ್ತು ಪ್ರೀತಿಯಿಂದಾಗಿ ಹಲವಾರು ನಾಟಕಗಳಿಗೆ ರಂಗವಿನ್ಯಾಸ, ಪರಿಕರ ವಿನ್ಯಾಸ ಮತ್ತು ಮುಖವಾಡಗಳನ್ನು ತಯಾರಿಸುವುದರ ಮೂಲಕ ರಂಗಭೂಮಿಯವರೂ ಆಗಿಬಿಟ್ಟಿದ್ದಾರೆ.ಮೈಸೂರು ದಸರಾ ಸಂದರ್ಭದಲ್ಲಿ ನೀಡುವ ಕಲಾಮೇಳ ಪ್ರಶಸ್ತಿ (ಫೋಟೋಗ್ರಫಿ) ಪಡೆದಿದ್ದಾರೆ.

ಶಿವಕುಮಾರ್ ಸುಣಗಾರ್

ಶಿವಕುಮಾರ್ ಸುಣಗಾರ್

ಶಿವಕುಮಾರ್ ಸುಣಗಾರ್ : ಶಿವ್ಕುಮಾರ್ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರ ಹಳ್ಳಿಯವರು. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಮ್.ವಿ.ಎ ಪದವಿ ಪಡೆದಿದ್ದಾರ‍ೆ. ರಂಗಭೂಮಿಯ ವಲಯದಲ್ಲೂ ಸಾಕಷ್ಟು ತೊಡಗಿಸಿಕೊಂಡಿದ್ದಾರೆ. ದೆಹಲಿ, ಮುಂಬಯಿ, ಬರೋಡ, ಅಹಮದಾಬಾದ್ ನಗರಗಳಲ್ಲಿ ತಮ್ಮ ಕೆಲಸದ ನಿಮಿತ್ತ ಸುತ್ತಾಡುತ್ತಾ ಕೆಲಸ ಮಾಡಿದ್ದಾರೆ. ಸದ್ಯಕ್ಕೆ ಅಹಮದಾಬಾದ್ ನಲ್ಲಿ ನೆಲೆ ನಿಂತು ತಮ್ಮ ಕಾರ್ಯವನ್ನು ಧ್ಯಾನಿಸುತ್ತಾ, ಯೂನಿನರ್ಸಿಟಿಗಳಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಕೆಲಸ ಮಾಡುತ್ತಾ ತಮ್ಮ ಸ್ಟೂಡಿಯೋದಲ್ಲಿ ದೃಶ್ಯ ಕಲೆಗೆ ಸಂಬಂಧಿಸಿದಂತೆ ತಮ್ಮ ಪ್ರಯೋಗಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ. ದೇಶ ವಿದೇಶಗಳಲ್ಲಿ ತಮ್ಮ ಕೃತಿಗಳನ್ನು ಪ್ರದರ್ಶನ ಮಾಡಿದ್ದಾರೆ. ಬಾಂಬೆ ಆರ್ಟ್ ಸೊಸೈಟಿಯಿಂದ ಪಶಸ್ತಿ ಪಡೆದಿದ್ದಾರೆ. ಆರ್ನವಾಝ್ ಸ್ಕಾಲರ್ ಶಿಪ್ ಮತ್ತು ಮಾನವ ಸಂಪನ್ಮೂಲ ಕೇಂದ್ರದಿಂದ ಸ್ಕಾಲರ್ ಶಿಪ್ ಪಡೆದಿದ್ದಾರೆ. ಇಷ್ಟೆಲ್ಲ ಸಾಧನೆಗೈದಿರುವ ಶಿವಕುಮಾರ್ ಸಂಚಾರಿ ಥಿಯೇಟರ್ ಗೆ ಮತ್ತು ನಮ್ಮ ಮಕ್ಕಳಿಗೆ ದೊರಕಿದ್ದು, ನಮ್ಮ ಮಕ್ಕಳೊಡನೆ ಮಗುವಾಗಿ ಆಟ ಆಡಿದ್ದು ನಮ್ಮ ಸೌಭಾಗ್ಯ.

Shiva Kumar & Kiran

Advertisements