‘ಏನಾದರೂ ಮಾಡುತಿರು ತಮ್ಮ, ನೀ ಸುಮ್ಮನಿರಬೇಡ’ ಎನ್ನುವುದನ್ನ ಸರಿಯಾಗಿ ಅರ್ಥ ಮಾಡಿಕೊಂಡಿರುವವನು ನಮ್ಮ ತಂಡದ ಚಂದ್ರಕೀರ್ತಿ.

ಹೇಳಿ ಕೇಳಿ ಎಲೆಕ್ಟ್ರಾನಿಕ್ ಕಮ್ಯುನಿಕೇಶನ್ ವಿಧ್ಯಾರ್ಥಿ. ಹಾಗಾಗಿ ಕಾಲಿಗೆ ಚಕ್ರ, ಕೈನಲ್ಲಿ ಮೈಕು, ಹೆಗಲಿಗೆ ಕ್ಯಾಮೆರಾ ಏರಿಸಿ ಕಂಡ ಕಡೆ ನಡದೇ ಬಿಡುತ್ತಾನೆ. ಹಾಗೆ ಈತ ಇತ್ತೀಚಿಗೆ ಹೋದದ್ದು ಕನ್ನಡ ರಂಗಭೂಮಿ ಕಾಣುತ್ತಿರುವ ಹೊಸ ಪ್ರಯೋಗ ‘ಮಲೆಗಳಲ್ಲಿ ಮದುಮಗಳು’ ನಾಟಕಕ್ಕೆ.

ಈ ನಾಟಕ ರಂಗವೇರಲು ಕಾರಣರಾದ ನಾಲ್ವರು ಇಲ್ಲಿದ್ದಾರೆ. ನಿರ್ದೇಶಕ ಸಿ ಬಸವಲಿಂಗಯ್ಯ, ಸೆಟ್ ಮಾಡಿದ ದ್ವಾರಕಾನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾ. ತ. ಚಿಕ್ಕಣ್ಣ ಹಾಗೂ ಈ ಕಾದಂಬರಿಗೆ ರಂಗ ರೂಪ ಕೊಟ್ಟ ಕೆ ವೈ ನಾರಾಯಣ ಸ್ವಾಮಿ .

Advertisements