Latest Entries »

ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಈ ಬಾರಿ ಸಂಚಾರಿ ಥಿಯೇಟರ್ ವೈದೇಹಿಯವರ ಕವನಗಳನ್ನು ದೃಶ್ಯಕ್ಕೆ ಅಳವಡಿಸುವ ಒಂದು ಸಾಹಸಕ್ಕೆ ಕೈ ಹಾಕಿದೆ.

ವೈದೇಹಿ ಕನ್ನಡದ ಪ್ರಮುಖ ಕವಯಿತ್ರಿ. ಬುದ್ಧಿ ಭಾವದ ಅಪೂರ್ವ ಸಂಗಮವಾದ ವೈದೇಹಿಯ ಕವನಗಳ ಕೇಂದ್ರ ಬಿಂದು ಹೆಣ್ಣು. ಸಂಚಾರಿ ಥಿಯೇಟರ್ ಪ್ರಯೋಗದ “ವ್ಯಾನಿಟಿ ಬ್ಯಾಗ್”ವೈದೇಹಿಯ ಕಾವ್ಯಲೋಕದ ವಿವಿಧ ನೆಲೆಗಳನ್ನು ಅನಾವರಣಗೊಳಿಸುತ್ತಾ ಆ ಮೂಲಕ ಹೆಣ್ಣಿನ ಚಿತ್ತ ಚಿತ್ತಾರದ ಅನೂಹ್ಯ ಸಂಗತಿಗಳನ್ನು ಹೆಣ್ಣಿಗೆ ಮಾತ್ರ ಅನುಭವಗಮ್ಯವಾಗುವ ಹಲವು ಅಮೂರ್ತ ಪ್ರಸಂಗಗಳನ್ನು, ಅವಳ ಭಾವ ಪ್ರಪಂಚದ ಹಲವು ಸೂಕ್ಷ್ಮ ನೇಯ್ಗೆಗಳನ್ನು ದೃಶ್ಯ ರೂಪಕದಲ್ಲಿ ಕಾಣಿಸುತ್ತದೆ. “ನೋಡಬಾರದು ಚೀಲದೊಳಗನು” ಎನ್ನುವ ವೈದೇಹಿಯವರ ಮಾತನ್ನೇ ವಿಸ್ತರಿಸುತ್ತಾ, “ನೋಡಲಾಗದ” ಆ ಬ್ಯಾಗಿನ ವ್ಯಾನಿಟಿಯ ಒಳಗಿರುವ ವಸ್ತು ಪ್ರಪಂಚವನ್ನು ವೈದೇಹಿಯವರ ಕಾವ್ಯಲೋಕದ ಹಲವು ಪ್ರಸಂಗಗಳ ಮೂಲಕ ಪ್ರಸ್ತುತಪಡಿಸಲಾಗುತ್ತದೆ.
ವ್ಯಾನಿಟಿ ಬ್ಯಾಗ್ ನ ರೂಪಕದಲ್ಲಿ ಹೆಣ್ಣಿನ ಅಂತರಂಗದ ಒಳನೋಟಗಳಿಗೆ ಸರ್ಚ್ ಲೈಟ್ ಬೀರಿ, ಹೆಣ್ಣಿನ ವಿಶ್ವರೂಪ ದರ್ಶನ ಮಾಡಿಸುವ ವೈದೇಹಿಯವರ ಪ್ರಯತ್ನವನ್ನು ದೃಶ್ಯರೂಪದಲ್ಲಿ ಕಟ್ಟಿಕೊಡುವ ಮಹದಾಶೆಯ ಹಂಬಲ ಸಂಚಾರಿ ಥಿಯೇಟರ್ ದು.

ವ್ಯಾನಿಟಿ ಬ್ಯಾಗ್ ಎಂಬ ಈ ಸ್ತ್ರೀಲೋಕದ ಕ್ಯಾನ್ ವಾಸ್ ನಲ್ಲಿ ಹೆಣ್ಣಿನ ಅಂತರಂಗದ ಪಿಸು ಮಾತು, ಮುತ್ತಿನಂತಹ ಗೀಚು ಕೊಟ್ಟು ಮಾಯವಾದವನು ಮಾಡಿದ ಗಾಯದ ನೋವು, ನಿತ್ಯದ ಅನ್ನಕ್ಕಾಗಿ ಬೆರಣಿ ತಟ್ಟುವ ಹುಡುಗಿ, ಆ ಕಾಯ ಕಷ್ಟದ ಬಾಲೆಯ ಎದೆನೋವು, ತನ್ನದೆನ್ನುವ ಆಸ್ತಿಯೇ ಇರದ ಹೆಣ್ಣು ಬರೆವ ಉಯಿಲು, ತ್ರಿಲೋಕ ಸಂಚಾರಿಯಾದ ಶಿವಗೆ, ಸೇವೆ ಮಾಡುತ್ತಲೇ ನಾನೆಷ್ಟನೆಯ ನಾರಿ? ಎಂದು ಲೇವಡಿ ಮಾಡುತ್ತಾ ಬಿಕ್ಕುವ ಆರ್ದ್ರ್ಗಗರ್ವದ ಗೌರಿಯ ತಲ್ಲಣ, ಒಂದಕೊಂದಕೆ ಅರ್ಥಾರ್ಥವಿಲ್ಲದೆಯೂ, ಅರ್ಥವಾಗದ ಭಾಷೆಯ ನಡುವೆಯೂ ಜೀವಿಸುವ ಜೋಡಿಗಳ ವಾಸ್ತವಿಕತೆ- ಒಟ್ಟಾರೆಯಾಗಿ “ನಿತ್ಯ ಮೂಡುತ ನಿತ್ತ್ಯ ಮುಳುಗುತ ಕಷ್ಟ ಸುಖಗಳ ಬೆಟ್ಟ ಕಡಲಲಿ ನಿತ್ಯ ಸುಡುತಿಹ ಸೂರ್ಯಳಾಗಿ ಪ್ರಜ್ವಲಿಸುತ್ತಿರುವ ಹೆಣ್ಣಿನ ಮನಸ್ಸಿನ ಒಳ್ಲಲೋಕವನ್ನು ಪ್ರತಿನಿಧಿಸುವ ರೂಪಕವಾದ ವ್ಯಾನಿಟಿ ಬ್ಯಾಗಿನಲ್ಲಿ ವೈದೇಹಿಯ ಎಲ್ಲ ಪ್ರಮುಖ ಕವನ್ಗಳನ್ನು ಅಡಗಿಸಿಟ್ಟಿರುವುದು ಈ ರಂಗಪ್ರಯೋಗದ ವಿಶೇಷ.

‘ಸಂಚಾರಿ ಥಿಯೇಟರ್’

ಅರ್ಪಿಸುವ

“ಕುವೆಂಪು” ಅವರ ಪುಟಾಣಿ ಕತೆಯೊಂದನ್ನು ಆಧರಿಸಿದ ಮಕ್ಕಳ ನಾಟಕ

“ನರಿಗಳಿಗೇಕೆ ಕೋಡಿಲ್ಲ?”

26 ಜನವರಿ 2012

ಸಂಜೆ  7:30ಕ್ಕೆ

ರಂಗ ಶಂಕರ

  

ಮಲೆಗಳಲ್ಲಿನ ಮದುಮಗಳ ಅಪ್ಪ,

    ಕಾನೂರು ಸುಬ್ಬಮ್ಮ ಹೆಗ್ಗಡತಿಯಪ್ಪ,

    ಕುಪ್ಪಳ್ಳಿಯಾ ಪುಟ್ಟಪ್ಪ!

    ಬರೆದಂತ ಮುದ್ದಾದ ಗುಬ್ಬಿಯಾ ಕತೆ ಇದು..

     ನವಿಲುಕಲ್ಲು ಬೆಟ್ಟದಾ ಮೇಲ್ನಡೆದ ಕತೆ ಇದು.. 


 

ರಂಗಾಯಣದ ವನರಂಗದಲ್ಲಿ ಸಂಚಾರಿ ಥಿಯೇಟರ್ ಅಭಿನಯಿಸಿದ

  ‘ನರಿಗಳಿಗೇಕೆ ಕೋಡಿಲ್ಲ?’ ನಾಟಕಕ್ಕೆ ತುಂಬಿ ತುಳುಕಿದ ಪ್ರೇಕ್ಷಕರು!!

ರಂಗಾಯಣದಲ್ಲಿ ನಡೆದ   “ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ” ದಲ್ಲಿ   ‘ನರಿಗಳಿಗೇಕೆ ಕೋಡಿಲ್ಲ?’

ನಾಟಕ ಪ್ರಯೋಗಕ್ಕೆ ಸಂಚಾರಿ ಕಲಾವಿದರ ಸಂಭ್ರಮ!

This slideshow requires JavaScript.

“ಸಂಚಾರಿ ಥಿಯೇಟರ್”

“ಬಹುರೂಪಿ” ರಾಷ್ಟ್ರೀಯ ನಾಟಕೋತ್ಸವದಲ್ಲಿ

“ಕುವೆಂಪು” ಅವರ ಪುಟಾಣಿ ಕತೆಯೊಂದನ್ನು ಆಧರಿಸಿದ ಮಕ್ಕಳ ನಾಟಕ

“ನರಿಗಳಿಗೇಕೆ ಕೋಡಿಲ್ಲ?”

ದಿನಾಂಕ :  22 ಜನವರಿ 2012 , ಭಾನುವಾರ

ಸ್ಥಳ : “ವನರಂಗ” (ಮೈಸೂರು-ರಂಗಾಯಣ)

ಸಮಯ : ಸಂಜೆ 7 ಗಂಟೆಗೆ


ಮೈಸೂರಿನ ಗೆಳೆಯರು ದಯವಿಟ್ಟು ನಿಮ್ಮ ಮಕ್ಕಳನ್ನು ಕರೆದುಕೊಂಡು ಬನ್ನಿ…

ಮಕ್ಕಳು ನೋಡಲೇಬೇಕಾದ ಮುದ್ದಾದ ನಾಟಕ ಇದು…!!

This slideshow requires JavaScript.

‘ಬ್ರಹ್ಮ ಚಾರಿಟಬಲ್ ಟ್ರಸ್ಟ್’

ಅರ್ಪಿಸುವ

‘ಸಂಚಾರಿ ಥಿಯೇಟರ್’

ಅಭಿನಯಿಸುವ

“ಕಮಲಮಣಿ ಕಾಮಿಡಿ ಕಲ್ಯಾಣ” 

  30-12-2011

  ಸಂಜೆ 6:30 ಕ್ಕೆ  

  ಕೆ.ಎಚ್.ಕಲಾ ಸೌಧ, ಹನುಮಂತ ನಗರ

‘ಕಮಲಮಣಿ’ ಕಲ್ಯಾಣದ ಕಾಮಿಡಿ ವೀಡಿಯೊ!

 

ನಾಟಕ ವಾಚನದಲ್ಲಿ ‘ಸಂಚಾರಿ’ ತಂಡ

‘ಸಂಚಾರಿ ಥಿಯೇಟರ್’ ಕಲಾವಿದರು

‘ಸುಚಿತ್ರ ಕಲಾ ಕೇಂದ್ರ’ ಆಯೋಜಿಸುವ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ

ಕೆ.ವೈ.ನಾರಾಯಣ ಸ್ವಾಮಿ ಅವರ ಹೊಸ ನಾಟಕ “ವಿನುರ ವೇಮ” ನಾಟಕ ಕೃತಿಯನ್ನು ವಾಚನ ಮಾಡಲಿದ್ದಾರೆ.

24 ನೇ ಡಿಸೆಂಬರ್ 2011,

 ಸಂಜೆ 5:30ಕ್ಕೆ

 ಕಿ.ರಂ.ನುಡಿಮನೆಯಲ್ಲಿ

ವಿನುರ ವೇಮ

ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.

ಗೆ,

‘ಸಂಚಾರಿ ಥಿಯೇಟರ್’,

ಮಂಗಳಾ.ಎನ್ ಅವರ ನಿರ್ದೇಶನದ ‘ಹೀಗೆರಡು ಕಥೆಗಳು’ ನೋಡಿದೆ ನಿನ್ನೆ. ತುಂಬಾ ಇಷ್ಟವಾಯ್ತು. :) ಜಯಂತ್ ಕಾಯ್ಕಿಣಿಯವರ ಕಥೆ ‘ನೊ ಪ್ರೆಸೆಂಟ್ಸ್ ಪ್ಲೀಸ್’ ಕಥೆಯನ್ನು ರಂಗಕ್ಕಳವಡಿಸುವುದು ಸ್ವಲ್ಪ ಕಠಿಣವೇ ಸರಿ. ಹಾಗೆಯೇ ವಸುಧೇಂದ್ರ ಅವರ ‘ಶ್ರೀದೇವಿ ಮಹಾತ್ಮೆ’ ಕಥೆ ಓದುದಕ್ಕಿಂತಲೂ  ರಂಗದ ಮೇಲೆಯೇ ಹೆಚ್ಚು ಆಪ್ತವೆನಿಸಿತು. :)  ಮಂಗಳಾ ಹೀಗೇ ಹೊಸತನದ ಹಾಸ್ಯದ ಹೊನಲಿನ ನಾಟಕಗಳು ನಿಮ್ಮಿಂದ ಹೆಚ್ಚು ಹೆಚ್ಚು ಬರಲಿ. ನಿಮಗೂ ಗೊತ್ತು, ನಮ್ಮಲ್ಲಿಯ ‘ಉತ್ತಮ’ ಹಾಸ್ಯ ನಾಟಕಗಳ ಕೊರತೆ. :)

ಪ್ರೀತಿಯಿಂದ,

 

ಜಯಲಕ್ಷ್ಮಿ ಪಾಟಿಲ್.

         ನಾಟಕ ಬೆಂಗ್ಳೂರು-೨೦೧೧ ರ ರಂಗಸಂಭ್ರಮ!

 ಸಂಚಾರಿ ಥಿಯೇಟರ್

ವಸುಧೇಂದ್ರ ಮತ್ತು ಜಯಂತ ಕಾಯ್ಕಿಣಿ ಅವರ ಕತೆಗಳ ರಂಗರೂಪ

“ಹೀಗೆರಡು ಕತೆಗಳು”

(ಶ್ರೀದೇವಿ ಮಹಾತ್ಮೆ ಮತ್ತು ನೋ ಪ್ರೆಸೆಂಟ್ಸ್ ಪ್ಲೀಸ್)

15 ಡಿಸೆಂಬರ್ 2011

ಸಂಜೆ 7:30 ಕ್ಕೆ

ರಂಗಶಂಕರ

ನೀವು ಬನ್ನಿ, ಗೆಳೆಯರನ್ನು ಕರೆತನ್ನಿ!

This slideshow requires JavaScript.

Follow

Get every new post delivered to your Inbox.

Join 35 other followers