Category: Uncategorized


‘ಸೋನು, ನಿನ್ನ ಒ೦ದು ಒಳ್ಳೆ ನಾಟಕಕ್ಕೆ ಕರ್ಕೊ೦ಡು ಹೋಗ್ತೀನಿ…’, ‘ನಾಟಕ ಅ೦ದ್ರೆ…?’ – ಪ್ರಶ್ನಿಸಿದ ೭ ವರ್ಷದ ನನ್ನ ತ೦ಗಿಯ ಮಗ. ‘ಮಮ್ಮ ನಿನ್ನ ಒ೦ದು ಪ್ಲೇ ಗೆ ಕರ್ಕೊ೦ಡು ಹೋಗ್ತಾರ೦ತೆ ಕಣೋ’, ಅ೦ತ ಅನುವಾದಿಸಿದಳು ನನ್ನ ತ೦ಗಿ. ಈ ಅನುವಾದ ಎ೦ಥಹ ಎಡವಟ್ಟು ಮಾಡಿದೆ ಅ೦ತ ನನಗೆ ಗೊತ್ತಾಗಿದ್ದು ನಾನು ಅವನನ್ನು ಕರ್ಕೊ೦ಡು ಹೊರಟ ಮೇಲೆಯೆ! ‘ಮ, ಅಲ್ಲಿ ಯಾವ ಯಾವ ಪ್ಲೇ ಆಡಬಹುದು ನಾನು’ ಅ೦ತ ಹುಡುಗ ಕೇಳಿದಾಗ, ‘ಕೆಲ್ಸ ಕೆಡ್ತು’ ಅ೦ದ್ಕೊ೦ಡೆ!! ಆಟಕ್ಕೆ ತಯಾರಾಗಿ ಬ೦ದ ಮಗುವನ್ನು ನಾಟಕ ತೋರಿಸುವುದು ಹೇಗಪ್ಪಾ ಶಿವನೆ’ ಅ೦ತ ಒದ್ದಾಡುತ್ತಲೇ ನಾಟಕಕ್ಕೆ ಅವನ ಮನಸ್ಸನ್ನು ಹದಗೊಳಿಸತೊಡಗಿದೆ…. ರ೦ಗಶ೦ಕರ ತಲುಪಿ, ಮು೦ದಿನ ಸಾಲಲ್ಲೆ ಕುಳಿತ ಮೇಲೂ ಅವನ ಚಡಪಡಿಕೆ ನಡೆದೇ ಇತ್ತು. ದೀಪ ಮ೦ಕಾಗಿ, ಪ್ರೇಕ್ಷಕರ ನಡುವಿನಿ೦ದಲೇ ಪಾತ್ರಧಾರಿಗಳು ಎದ್ದು ವೇದಿಕೆ ಹತ್ತಿದರು ನೋಡಿ, ಹುಡುಗ ಥ್ರಿಲ್ಲು! ಅವನ ಜೊತೆಗೆ ಅಣ್ಣನ ಮಗಳನ್ನೂ ಕರೆದುಕೊ೦ಡು ಹೋಗಿದ್ದೆ, ಇಬ್ಬರೂ ನಾಟಕದಲ್ಲಿ ಮುಳುಗಿದ ಪರಿ ಇತ್ತಲ್ಲಾ… ಗುಬ್ಬಿಯ ಚಿ೦ವ್ ಚಿ೦ವ್, ನರಿಯ ಜ೦ಬ, ಹುಲಿ, ಕರಡಿಯ ಹಾಸ್ಯ ಎಲ್ಲಕ್ಕೂ ಸ್ಪ೦ದಿಸುತ್ತಾ ಹೋದರು.

ನಾಟಕ ಸಾಗಿದ೦ತೆ … ಗುಬ್ಬಕ್ಕ ಹೊರಗಡೆಯಿ೦ದ ಒಳ ಬ೦ದು ನೋಡುತ್ತಾಳೆ, ಮನೆಯಲ್ಲಿ ಮಕ್ಕಳಿಲ್ಲ… ತುಟಿ ಬಿಗಿದು ನಾಟಕ ನೋಡುತ್ತಿದ್ದ ಹುಡುಗ ಕಣ್ಣರಳಿಸಿ, ‘ಮಾ, ಅಮ್ಮನದೇ ತಪ್ಪು, ಮಕ್ಕಳನ್ನು ಹಾಗೆಲ್ಲಾ ಬಿಟ್ಟು ಹೋಗಬಾರದು, ಅದು ರಾ೦ಗ್ ಮಾ…’ ಅ೦ತ ತುಟಿಯುಬ್ಬಿಸಿ ನುಡಿದಾಗಲೇ ಗೊತ್ತಾಗಿದ್ದು ಇವನ ಮನಸ್ಸಿನಲ್ಲಿ ನಾಟಕ ಎಷ್ಟು ಅವನದಾಗಿ ಹೋಗಿದೆ ಅ೦ತ!

ಮಕ್ಕಳಿಗೆ ತು೦ಬಾ ಖುಶಿಕೊಡುವ ನಾಟಕ, ವಸ್ತ್ರ ವಿನ್ಯಾಸ, ಸ೦ಗೀತ ಎಲ್ಲವೂ ಖುಶ್ ಖುಶ್…. ಭಾನುವಾರ ರ೦ಗಶ೦ಕರದಲ್ಲಿ ನಾಟಕ, ಮಕ್ಕಳಿಗಷ್ಟೇ ಅಲ್ಲ, ದೊಡ್ಡವರನ್ನೂ ಹಿಡಿದು ಕೂರಿಸಿದ ನಾಟಕ.

- ಎನ್ ಸ೦ಧ್ಯಾ ರಾಣಿ

ಕೃಪೆ – ಅವಧಿ

ನಿನ್ನೆ ರಂಗಶಂಕರದಲ್ಲಿ, ವೈದೇಹಿಯವರ ಕವನಗಳ ಆಧಾರಿತ, ಎನ್.ಮಂಗಳಾ ಅವರ ನಿರ್ದೇಶನದ ‘ವ್ಯಾನಿಟಿ ಬ್ಯಾಗ್’ ನೋಡಿದೆ, ಖುಷಿಯಾಯ್ತು. ಕನ್ನಡದಲ್ಲಿ ಈ ಥರದ ಪ್ರಯೋಗಗಳು ಆಗುತ್ತಿರುವುದು ಸಂತಸದ ಮತ್ತು ಆರೋಗ್ಯಕರ ವಿಚಾರ.

“ಮಂಗಳಾ ನಿಮ್ಮಿಂದ ಇನ್ನಷ್ಟು ಮತ್ತಷ್ಟು ಇಂಥ ಹೊಸ ಪ್ರಯೋಗಗಳನ್ನು ತುಂಬಾ ತುಂಬಾ ನಿರೀಕ್ಷಿಸುತ್ತಿದೆ ಕನ್ನಡ ರಂಗಭೂಮಿ.ನಿರಾಸೆಯಾಗದು ಎನ್ನುವುದೂ ಬಲ್ಲೆ ನಾನು. ನಿಮಗೂ ನಿಮ್ಮ ತಂಡಕ್ಕೂ ಶುಭಾಶಯಗಳು.” :)

 -ಜಯಲಕ್ಷ್ಮಿ ಪಾಟೀಲ್ 



‘ಬ್ರಹ್ಮ ಚಾರಿಟಬಲ್ ಟ್ರಸ್ಟ್’

ಅರ್ಪಿಸುವ

‘ಸಂಚಾರಿ ಥಿಯೇಟರ್’

ಅಭಿನಯಿಸುವ

“ಕಮಲಮಣಿ ಕಾಮಿಡಿ ಕಲ್ಯಾಣ” 

  30-12-2011

  ಸಂಜೆ 6:30 ಕ್ಕೆ  

  ಕೆ.ಎಚ್.ಕಲಾ ಸೌಧ, ಹನುಮಂತ ನಗರ

‘ಕಮಲಮಣಿ’ ಕಲ್ಯಾಣದ ಕಾಮಿಡಿ ವೀಡಿಯೊ!

 

ಗೆ,

‘ಸಂಚಾರಿ ಥಿಯೇಟರ್’,

ಮಂಗಳಾ.ಎನ್ ಅವರ ನಿರ್ದೇಶನದ ‘ಹೀಗೆರಡು ಕಥೆಗಳು’ ನೋಡಿದೆ ನಿನ್ನೆ. ತುಂಬಾ ಇಷ್ಟವಾಯ್ತು. :) ಜಯಂತ್ ಕಾಯ್ಕಿಣಿಯವರ ಕಥೆ ‘ನೊ ಪ್ರೆಸೆಂಟ್ಸ್ ಪ್ಲೀಸ್’ ಕಥೆಯನ್ನು ರಂಗಕ್ಕಳವಡಿಸುವುದು ಸ್ವಲ್ಪ ಕಠಿಣವೇ ಸರಿ. ಹಾಗೆಯೇ ವಸುಧೇಂದ್ರ ಅವರ ‘ಶ್ರೀದೇವಿ ಮಹಾತ್ಮೆ’ ಕಥೆ ಓದುದಕ್ಕಿಂತಲೂ  ರಂಗದ ಮೇಲೆಯೇ ಹೆಚ್ಚು ಆಪ್ತವೆನಿಸಿತು. :)  ಮಂಗಳಾ ಹೀಗೇ ಹೊಸತನದ ಹಾಸ್ಯದ ಹೊನಲಿನ ನಾಟಕಗಳು ನಿಮ್ಮಿಂದ ಹೆಚ್ಚು ಹೆಚ್ಚು ಬರಲಿ. ನಿಮಗೂ ಗೊತ್ತು, ನಮ್ಮಲ್ಲಿಯ ‘ಉತ್ತಮ’ ಹಾಸ್ಯ ನಾಟಕಗಳ ಕೊರತೆ. :)

ಪ್ರೀತಿಯಿಂದ,

 

ಜಯಲಕ್ಷ್ಮಿ ಪಾಟಿಲ್.

ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ, ಪ್ರಾದೇಶಿಕ ಸಂಪನ್ಮೂಲ ಕೇಂದ್ರ ಬೆಂಗಳೂರು ಬೆಳಗಾಂವ್ ನಲ್ಲಿ  ಆಯೋಜಿಸಿದ್ದ “ಮಳೆಬಿಲ್ಲು ಮಕ್ಕಳ ನಾಟಕೋತ್ಸವ’ ದಲ್ಲಿ ಸಂಚಾರಿ ಥಿಯೇಟರ ಕುವೆಂಪು ಅವರ ಸಣ್ಣ ಕತೆ ಆಧಾರಿತ “ನರಿಗಳಿಗೇಕೆ ಕೋಡಿಲ್ಲ” ನಾಟಕವನ್ನು  ನಾಟಕೋತ್ಸವದ ಉದ್ಘಾಟನೆಯ ನಂತರ ಅಭಿನಯಿಸಿತು.

 ಹಿರಿಯಜ್ಜ ಏಣಗಿ ಬಾಳಪ್ಪನವರ ಉಪಸ್ಥಿತಿ ಕಲಾವಿದರೊಳಗೆ  ಸಂಚಲನ ಉಂಟು ಮಾಡಿ, ಪ್ರದರ್ಶನಕ್ಕೆ ಕಳೆಯೇರಿತ್ತು.

This slideshow requires JavaScript.

‘ನೊ ಪ್ರೆಸೆಂಟ್ಸ್ ಪ್ಲೀಸ್’ ಕತೆಯ ಲೇಖಕ

ಜಯಂತ ಕಾಯ್ಕಿಣಿ ಅವರು ರಿಹರ್ಸಲ್ ನಂತರದ ಮಾತುಕತೆಯಲ್ಲಿ.

ವಸುಧೇಂದ್ರ ಅವರು ನಾಟಕದ ರಿಹರ್ಸಲ್ ನಂತರದ ಮಾತುಕತೆಯಲ್ಲಿ.

 

28-08-2011

ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಶ್ರೀ ಕ್ರಿಯೇಷನ್ಸ್ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ

ಸಂಚಾರಿ ಥಿಯೇಟರ್  ”ಕಮಲಮಣಿ ಕಾಮಿಡಿ ಕಲ್ಯಾಣ” ನಾಟಕವನ್ನು ಪ್ರದರ್ಶಿಸಿತು.

 

This slideshow requires JavaScript.

   ಜುಲೈ  3 ಮತ್ತು  21, 2011

  ಹನುಮಂತನಗರದ ಕಲಾಸೌಧ ರಂಗಮಂದಿರದಲ್ಲಿ ಕಮಲಮಣಿ ಕಾಮಿಡಿ ಕಲ್ಯಾಣದ ಮರುಪ್ರದರ್ಶನ.

ಕಳೆದ ವರ್ಷವಷ್ಟೇ ’ಕಲ್ಯಾಣದ ದಿನಗಳು’ ನಾಟಕವನ್ನು ಬರೆದು ಮುಗಿಸಿದ ಪ್ರೊ.ಕಾ.ವೆಂ.ರಾಜಗೋಪಾಲ್ ಈ ವರ್ಷ ಮತ್ತೊಂದು ನಾಟಕವನ್ನು ಬರೆದಿದ್ದಾರೆ.   ನವಕರ್ನಾಟಕ ಬಳಗ ಈ ನಾಟಕದ ವಾಚನವನ್ನು     ತಮ್ಮ ಆಪೀಸಿನ ಆವರಣದಲ್ಲಿ ಆಯೋಜಿಸಿತ್ತು.. ನಾಟಕವಾಚನ ಎಂದರೆ ಸಾಮಾನ್ಯ ಒಬ್ಬರೇ ಓದುವುದು  ರೂಢಿಯಲ್ಲಿದ್ದು, ಈ ಪದ್ಧತಿ ಒಂದಿಷ್ಟು ಬೋರು ಹೊಡೆಸಿಬಿಡಬಹುದೆಂಬ ಆತಂಕದಿಂದ ಸಂಚಾರಿ ಥಿಯೇಟರ್ ಕಲಾವಿದರು ಈ ನಾಟಕವನ್ನು ಗುಂಪಿನಲ್ಲಿ ಕೂತು ಓದುವ ಪ್ರಯತ್ನ ಮಾಡಿದರು.  ಜೂನ್ ೧೧ ರಂದು ಈ ನಾಟಕದ ವಾಚ ನ  ನಾಟಕಕಾರರ ಸಮ್ಮುಖದಲ್ಲಿ ರಂಗಾಸಕ್ತರ ನಡುವೆ ನಡೆಯಿತು.

ಈ ಪ್ರಯತ್ನವನ್ನು ಶ್ಲಾಘಿಸಿದ ಸುಚಿತ್ರಾ ಕಲಾಕೇಂದ್ರ ದ ಬಳಗದವರು ಸುಚಿತ್ರಾಕಲಾಕೇಂದ್ರದಲ್ಲಿ ೧೦ನೇ ಜುಲೈ, ೨೦೧೧, ಭಾನುವಾರದಂದು ಕನ್ನಡ ಚಿಂತನೆ  ಕಾರ್ಯಕ್ರಮದಡಿಯಲ್ಲಿ ಮತ್ತೊಮ್ಮೆ ಈ ನಾಟಕದ ವಾಚನವನ್ನು ಆಯೋಜಿಸಿದ್ದರು. ಸಂಚಾರಿ ಥಿಯೇಟರ್ ಕಲಾವಿದರಿಂದ ನಾಟಕವಾಚನದ ಮರುಪ್ರದರ್ಶನವಾಯಿತು.

Follow

Get every new post delivered to your Inbox.

Join 35 other followers