Category: ಹೀಗೆರಡು ಕತೆಗಳು


         ನಾಟಕ ಬೆಂಗ್ಳೂರು-೨೦೧೧ ರ ರಂಗಸಂಭ್ರಮ!

 ಸಂಚಾರಿ ಥಿಯೇಟರ್

ವಸುಧೇಂದ್ರ ಮತ್ತು ಜಯಂತ ಕಾಯ್ಕಿಣಿ ಅವರ ಕತೆಗಳ ರಂಗರೂಪ

“ಹೀಗೆರಡು ಕತೆಗಳು”

(ಶ್ರೀದೇವಿ ಮಹಾತ್ಮೆ ಮತ್ತು ನೋ ಪ್ರೆಸೆಂಟ್ಸ್ ಪ್ಲೀಸ್)

15 ಡಿಸೆಂಬರ್ 2011

ಸಂಜೆ 7:30 ಕ್ಕೆ

ರಂಗಶಂಕರ

ನೀವು ಬನ್ನಿ, ಗೆಳೆಯರನ್ನು ಕರೆತನ್ನಿ!

This slideshow requires JavaScript.

‘ನೊ ಪ್ರೆಸೆಂಟ್ಸ್ ಪ್ಲೀಸ್’ ಕತೆಯ ಲೇಖಕ

ಜಯಂತ ಕಾಯ್ಕಿಣಿ ಅವರು ರಿಹರ್ಸಲ್ ನಂತರದ ಮಾತುಕತೆಯಲ್ಲಿ.

ಈ ಸಲದ ನಾಟಕ ಬೆಂಗ್ಳೂರು ರಂಗಸಂಭ್ರಮದಲ್ಲಿ ಸಂಚಾರಿ ಥಿಯೇಟರ್ ಎರಡು ಕತೆಗಳನ್ನು ಆಧರಿಸಿದ  ರಂಗರೂಪ “ಹೀಗೆರಡು ಕತೆಗಳು” ಎಂಬ  ನಾಟಕವನ್ನು ಕೈಗೆತ್ತಿಕೊಂಡಿದೆ. ಈ ನಾಟಕಕ್ಕೆ ಶಶಿಧರ ಅಡಪ ಅವರ ರಂಗವಿನ್ಯಾಸವಿದೆ. ಬೆಳಕು ವಿನ್ಯಾಸವನ್ನು ಮುಸ್ತಾಫ, ವಸ್ತ್ರವಿನ್ಯಾಸವನ್ನು ಸುರಭಿ ಮತ್ತು ಪ್ರಚಾರ ಕಾರ್ಯವನ್ನು ಚಂದ್ರಕೀರ್ತಿ ನಿರ್ವಹಿಸಿದ್ದಾರೆ. ಸಂಗೀತ ನಿರ್ದೇಶನ ಗಜಾನನ.ಟಿ.ನಾಯ್ಕ ಅವರದ್ದು. ಕಲಾವಿದರು ವಿಜಯ್, ಸುರಭಿ, ಚಂದ್ರಕೀರ್ತಿ, ಗಣಪ, ಸೌಮ್ಯ, ನಿಶಾ ಮತ್ತು ನಾಗರಾಜ. ನಿರ್ದೇಶನ ಎನ್.ಮಂಗಳಾ.

ಹೀಗೆರಡು ಕತೆಗಳು :

ಕನ್ನಡ  ಸಾಹಿತ್ಯ ಕ್ಷೇತ್ರದ ಇವತ್ತಿನ ಬಹು ಮುಖ್ಯ ಕತೆಗಾರರಾಗಿರುವ ವಸುಧೇಂದ್ರ ಮತ್ತು  ಜಯಂತ ಕಾಯ್ಕಿಣಿ ಅವರ ಕತೆಗಳನ್ನು (ಶ್ರೀದೇವಿ ಮಹಾತ್ಮೆ ಮತ್ತು ನೊ ಪ್ರೆಸೆಂಟ್ಸ್ ಪ್ಲೀಸ್ )ಒಟ್ಟಿಗೆ ರಂಗದ ಮೇಲೆ ತರುವ ಪ್ರಯತ್ನವೇ “ಹೀಗೆರಡು ಕತೆಗಳು” ಎಂಬ ನಾಟಕ.

ಓಟದ ಬದುಕಿಗೆ ಹೆಸರಾಗಿರುವ ಬೆಂಗಳೂರಿನ ಅಪಾರ್ಟಮೆಂಟ್ ಒಂದರಲ್ಲಿ ಮತ್ತು ಬಾಂಬೆ ಟ್ರಾಫಿಕ್ ತುಂಬಿದ ಅಭಿವೃದ್ಧಿಯ ದಾರಿಯಲ್ಲಿರುವ ರಸ್ತೆಗಳ ನಡುವೆ ಮತ್ತು  ಭರ್ತಿ ಜನರಿಂದ ತುಂಬಿ ತುಳುಕುವ ರೈಲ್ವೆ ಸ್ಟೇಷನ್ ನಲ್ಲಿ ನಡೆಯುವ ಈ ಕತೆಗಳು ಎರಡು ಬೇರೆ ಬೇರೆ ನೆಲೆಗಳಲ್ಲಿ ಭಿನ್ನ ಕಥಾವಸ್ತುವನ್ನು ಹೇಳುವುದರ ಮೂಲಕ ಅವುಗಳ ಸಾಮ್ಯತೆಯನ್ನು ಗುರುತಿಸಿಕೊಳ್ಳುತ್ತಾ ಇವತ್ತಿನ ವಾಸ್ತವದ ಸಂಗತಿಗಳನ್ನು ಎದುರುಗೊಳ್ಳುವ ಪ್ರಯತ್ನ ಇಲ್ಲಿದೆ. ಬದುಕಿನ ಕೆಲವು ಗೊಂದಲಗಳು, ಬದುಕಿನ ಸತ್ಯಗಳು, ಬದುಕನ್ನು ಎದುರುಗೊಳ್ಳುವ ಬೇರೆ ಬೇರೆ ಸನ್ನಿವೇಶಗಳು ಮತ್ತು ಅದನ್ನು ಅರ್ಥೈಸಿಕೊಳ್ಳುವ ಪರಿಯ ಮೂಲಕ ಇವತ್ತು ನಾವು ಬದುಕುತ್ತಿರುವ ಬದುಕನ್ನು ಗ್ರಹಿಸುವ ಪಯಣ ಇದು. ಯುವ ಮನಸ್ಸುಗಳ ಮದುವೆ, ಕನಸು, ಕೆಲಸ, ಹೆಸರು,ವ್ಯಕ್ತಿತ್ವ, ಜಾತಿ, ನಿಯಮ, ಆದರ್ಶ, ಓಟದ ಬದುಕಿನ ನಗರಗಳು, ಆಧುನಿಕ ಬದುಕಿನ ರೀತಿ – ಈ ಎಲ್ಲವುಗಳ ಬಿಡಿ ಬಿಡಿ ಚಿತ್ರಣಗಳನ್ನುನೀಡುವುದರ ಮೂಲಕ ಕತೆ ಹೇಳುತ್ತದೆ “ಹೀಗೆರಡು ಕತೆಗಳು” ನಾಟಕ.

 

Follow

Get every new post delivered to your Inbox.

Join 35 other followers