ಸಂಚಾರಿ ಥಿಯೇಟ್ರು ನಾಟಕ ತಂಡ ಕುವೆಂಪು ಅವರು ರಚಿಸಿರುವ ‘ ನರಿಗಳಿಗೇಕೆ ಕೋಡಿಲ್ಲ’ ಕಥನವನ್ನು ರಂಗದ ಮೇಲೆ ತರುತ್ತಿದೆ. ಆ ನಾಟಕದ ರಿಹರ್ಸಲ್ ನ ಒಂದು ನೋಟ ಇಲ್ಲಿದೆ…
Category: ಎನ್ ಮಂಗಳಾ
Dear Sanchari Team,
It was a feast to watch your Arahanta show at Rangashankara. Keep it up!
Being a regular viewer visitor to Rangashakara, I am a spectator for almost many stage plays there. Arahanta was one of the best plays i’ve ever seen. Congratulations.
But it was quite gloomy to see very few audience; so 13th Friday did not spare even the best play. Never Mind…Cheers! Success will and must follow every honest and dedicated effort some or the other day. keep rocking!
Regards
Prashanth
thanks prashanth for your good words
-N Mangala
for Sanchari Theatru
ಕರ್ನಾಟಕಕ್ಕೊಬ್ಬನೇ ಚೀನೀ…
ಹಾಗಂತ ಹೇಳ್ತಿರೋದು ನಾನಲ್ಲ. ಹಾಗೆ ಹೇಳಿದ್ದು, ಇಡೀ ಭಾರತೀಯ ರಂಗಭೂಮಿಯನ್ನಾವರಿಸಿದ, ರಂಗಸಂಗೀತಕ್ಕೆ ಹೊಸ ದಿಕ್ಕು ತೋರಿಸಿದ ಬಿ.ವಿ.ಕಾರಂತರು.
ಚೀನೀ ಸರ್, ಏನು ಅನ್ನೋದು ಬಹುಶಃ ಅವರೊಡನೆ ಕೆಲಸ ಮಾಡಿದ ಪ್ರತಿಯೊಬ್ಬರ ಅನುಭವಕ್ಕೆ ಬಂದಿರುವ ವಿಷಯ. 10 ಅಥವಾ 15 ವರ್ಷಗಳ ಹಿಂದೆ ಮಾಡಿದ ನಾಟಕವನ್ನು ಮತ್ತೆ ಮರುಪ್ರದರ್ಶನ ಮಾಡಬೇಕಾದರೆ ಸಾವಿರ ತೊಂದರೆಗಳು ಎದುರಾಗುತ್ತವೆ. ಆದರೆ ಆ ನಾಟಕದ ಸಂಗೀತದ ವಿಭಾಗದಲ್ಲಿ ಚೀನಿಯವರು ಇದ್ದಲ್ಲಿ, ಖಂಡಿತ ಯಾವ ತೊಂದರೆಯೂ ಇರಲಿಕ್ಕಿಲ್ಲ. ಯಾಕೆಂದರೆ ಹೆಚ್ಚು ಕಡಿಮೆ ಎಲ್ಲವೂ ಅವರ ತಲೆಯೊಳಗೆ ಇರುತ್ತದೆ. ಅಥವಾ ಒಮ್ಮೆ ಅವರ ಡೈರಿ ತಿರುಗಿಸಿಬಿಟ್ಟರೆ ಸಾಕು, ಸಣ್ಣಾತಿ ಸಣ್ಣ ಸಂಗೀತದ ವಿವರಗಳು ಅದರಲ್ಲಿ ದಾಖಲಾಗಿಬಿಟ್ಟಿರುತ್ತದೆ. ಸಂಗೀತ ನಿರ್ವಹಣೆ ಅಂದರೆ ಏನು ಅಂತ ತಿಳಿದುಕೊಳ್ಳಬೇಕೆಂದರೆ ಒಮ್ಮೆ ಅವರ ಡೈರಿಯನ್ನು ನೋಡಬೇಕು.
ಕಾರಂತರಂತೂ ಚೀನಿಯನ್ನು ತಾವು ಹೋದಲ್ಲೆಲ್ಲ ಕರೆದುಕೊಂಡು ಹೋಗುತ್ತಿದ್ದರು. ದೆಹಲಿ, ಭೂಪಲ್, ನೀನಾಸಂ, ರಂಗಾಯಣ ಹೀಗೆ ಎಲ್ಲ ರೆಪರ್ಟರಿಗಳಲ್ಲೂ ಕೆಲಸ ಮಾಡಿದ ಅನುಭವ ಚೀನಿಯವರಿಗಿದೆ. ಒಬ್ಬರೇ ಹಲವಾರು ವಾದ್ಯಗಳನ್ನು ಏಕಕಾಲದಲ್ಲಿ ನುಡಿಸುತ್ತಾ, ಹಾಡುತ್ತಾ, ಮೇಳವನ್ನು ಜಾಗರೂಕರನ್ನಾಗಿಸಿ ಹಾಡಿಸುತ್ತಾ, ಜೊತೆಗೆ ಸಿ.ಡಿಗಳನ್ನು ನಿರ್ವಹಿಸುವ ಅವರ ಚಾಕಚಕ್ಯತೆಯನ್ನು ನೋಡಿಯೇ ಅರ್ಥ ಮಾಡಿಕೊಳ್ಳಬೇಕು. ಸಂಗೀತ ನಿರ್ದೇಶಕನ ಕೆಲಸ ಸಂಗೀತ ಸಂಯೋಜನೆ ಮಾಡುವುದಷ್ಟಕ್ಕೆ ಉಳಿಯುವುದಿಲ್ಲ. ಅದು ಪ್ರದರ್ಶನದ ವೇಳೆ ಹೇಗೆ ನಿರ್ವಹಣೆಯಾಗಬೇಕು ಎಂಬುದರ ಕಡೆಗೂ ಮುಂದುವರಿಯುತ್ತದೆ. ಕೆಲವು ಬಾರಿ ಸಂಗೀತ ನಿರ್ದೇಶಕರು ಯಾವಾಗಲೂ ಎಲ್ಲ ಪ್ರದರ್ಶನಗಳಿಗೂ ಹಾಜರಾಗುವುದಕ್ಕೆ ಸಾಧ್ಯವಿಲ್ಲ. ಅಂಥ ಸಂದರ್ಭದಲ್ಲಿ ಅದನ್ನು ನಿರ್ವಹಣೆ ಮಾಡುವವರೇ ಮುಖ್ಯರಾಗಿಬಿಡ್ತಾರೆ. ಈ ರೀತ ಬಿ.ವಿ.ಕಾರಂತರಂಥ ದೊಡ್ಡ ಸಂಗೀತ ನಿರ್ದೇಶಕರಿಗೆ ಯಾವಾಗಲೂ ಜೊತೆಯ ಲ್ಲಿ ನಿಂತವರು ಚೀನಿ. ಅಲ್ಲದೆ ಇದೇ ರೀತಿ ಕಾರಂತರಿಗೆ ನೀನಾಸಂನ ಚಂಡೆ ನಾಗರಾಜ್, ಚಂದ್ರಶೇಖರ ಆಚಾರ್, ಗಜಾನನ.ಟಿ.ನಾಯ್ಕ, ಉಜ್ಜಯಿನಿಯ ಭೂಷಣ್ ಭಟ್, ಭೂಪಾಲಿನ ಅಮೋಲ್, ರೂಬಿ ಎಲ್ಲರೂ ನಿಂತಿದ್ದರು.
ಇವತ್ತಿನ ರಂಗಭೂಮಿಯ ಅತ್ಯಂತ ಅಗತ್ಯದ ರಂಗಸಂಗೀತ ನಿರ್ದೇಶಕರಾಗಿರುವ ಗಜಾನನ ನಾಯ್ಕ ಅವರು ಯಾವಾಗಲೂ ಹೇಳುತ್ತಿರುತ್ತಾರೆ, ಸಂಗಿತ ಸಾಂಗತ್ಯ ನೀಡುವುದು ಅಂದರೆ ಏನು ಅನ್ನೋದನ್ನು ಈಗಿನವರು ಚೀನಿ ಸರ್ ಅವರನ್ನು ನೋಡಿ ಕಲೀಬೇಕು. ಅವರಂತೆ ನಾಟಕದ ಮೇಳವನ್ನು ನಿರ್ವಹಣೆ ಮಾಡೋರನ್ನು ನಾನು ನೋಡಲೇ ಇಲ್ಲ ಅಂತಾರೆ . ಅವರು ಕೂಡ ಚೀನಿ ಸರ್ ಅವರಿಂದ ಕಲಿತವರೇ. ಗಜಾನನ ಪ್ರತೀ ಹೊಸ ಪ್ರಯೋಗವನ್ನು ಕಟ್ಟುವಾಗಲೂ ಚೀನಿಯವರನ್ನು ನೆನೆಸುತ್ತಾರೆ.
ಈಗಂತೂ ಕಾರಂತರ ನಂತರ ರಂಗಾಯಣದಲ್ಲಿ ಹೆಚ್ಚು ಕಡಿಮೆ ಎಲ್ಲ ನಾಟಕಗಳಿಗೂ ಚೀನಿಯವರೇ ಸಂಗೀತ ನಂಯೋಜನೆ ಮತ್ತು ನಿರ್ವಹಣೆ ಮಾಡುತ್ತಿದ್ದಾರೆ. ಚಿಣ್ಣರ ಮೇಳದ ಸಂದರ್ಭದಲ್ಲಂತು ಒಟ್ಟೊಟ್ಟಿಗೆ 8 ರಿಂದ 10 ನಾಟಕಗಳಿಗೆ ಏಕಕಾಲದಲ್ಲಿ ಕೆಲಸ ಮಾಡುತ್ತಾರೆ.ಮೊನ್ನೆ ಮಲೆಗಳಲ್ಲಿ ಮದುಮಗಳು ನಾಟಕದಲ್ಲಿ 9 ಗಂಟೆ ನಿರಂತರವಾಗಿ , ನಿಮಿಷ ಕೂಡ ಕದಲದೆ ಇಡೀ ನಾಟಕದುದ್ದಕ್ಕೂ ಬರುವ ಎಲ್ಲ ರೀತಿಯ ಸಂಗೀತವನ್ನು ನಿರ್ವಹಣೆ ಮಾಡಿದ ಚೀನಿ ಅವರನ್ನು ನೋಡಿ ಇಡೀ ತಂಡವೇ ದಂಗಾಗಿಬಿಟ್ಟಿದೆ. ಇಂತಹ ಮ್ಯಾಜಕ್ ಅನ್ನು ಶ್ರೀನಿವಾಸ ಭಟ್ ಯಾವಾಗಲೂ ಮಾಡುತ್ತಿರುತ್ತಾರೆ.
ಶ್ರೀನಿವಾಸ ಭಟ್ ಅಂದರೆ ಹೆಚ್ಚು ಜನಕ್ಕೆ ಗೊತ್ತಾಗೋದೆ ಇಲ್ಲ. ಅವರು ಎಲ್ಲರ ಪ್ರೀತಿಯ ಚೀನೀ...
ಸಂಚಯ ಮತ್ತು ಸುಚಿತ್ರ ಫಿಲ್ಮ್ ಸೊಸೈಟಿಯವರು ನಡೆಸಿದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಅಡಿಗರ ‘ಭೂಮಿಗೀತ’ ಸಂಕಲನದ ಕವನಗಳ ವಾಚನ, ಅವುಗಳ ಬಗ್ಗೆ ಮಾತುಕತೆ ನಡೆಯಿತು. ಆ ಸಂಧರ್ಭದಲ್ಲಿ ನಾನು ಭೂಮಿಗೀತ ಪದ್ಯ ಓದುತ್ತಿದ್ದರೆ, ನನಗೆ ನಾವು ರಂಗಾಯಣದಲ್ಲಿ ನಾಟಕ ಮಾಡಿದ್ದರ ನೆನಪು ಒತ್ತಿ ಬರುತ್ತಿತ್ತು.
ನಿರ್ದೇಶಕರಾಗಿದ್ದ ಜಯತೀರ್ಥ ಜೋಶಿ ಪದ್ಯದ ಸಾಲುಗಳನ್ನು ನೀಡಿ ನಮ್ಮಿಂದ ಆಶುವಿಸ್ತರಣೆ ಮಾಡಿಸುತ್ತಿದ್ದರು. ಒಂದೇ ಸಾಲನ್ನು ಹಿಡಿದು ಮೂರು ನಾಲ್ಕು ಗುಂಪುಗಳು ಬೇರೆ ಬೇರೆಯಾಗಿ ದೃಶ್ಯೀಕರಿಸುತ್ತಿದ್ದೆವು. ನಂತರ ಎಲ್ಲರೂ ಮಾಡಿ ತೋರಿಸಿದ ಮೇಲೆ. ಅದನ್ನು ತಿದ್ದಿ ತೀಡಿ ಒಂದು ರೂಪಕ್ಕೆ ತಂದು ನಿಲ್ಲಿಸುತ್ತಿದ್ದ ರೀತಿ; ಜಿ.ಹೆಚ್.ನಾಯಕರು, ಕೀರಂ ನಾಗರಾಜ ಅವರುಗಳು ನಮಗೆ ಪದ್ಯ ಅರ್ಥೈಸಿಕೊಡುತ್ತಿದ್ದ ತರಗತಿಗಳು; ರಘುನಂದನರು ಅದರ ವಾಚನ ಕುರಿತಂತೆ ನಡೆಸುತ್ತಿದ್ದ ಅಭ್ಯಾಸಗಳು, ಎಲ್ಲವೂ ಸಾಲು ಸಾಲಾಗಿ ನೆನಪಿನ ಪದರುಗಳಿಂದ ಬಿಚ್ಚಿಕೊಳ್ಳಲಾರಂಭಿಸಿದವು.
ಸತತವಾಗಿ ಮೂರು ತಿಂಗಳ ಕಾಲ ಆ ಪದ್ಯದ ಮೇಲೆ ನಾವೆಲ್ಲರೂ ಕೆಲಸ ಮಾಡಿದ್ದೆವು. ಆ ನಾಟಕಕ್ಕೆಂದೇ ದ್ವಾರಕೀ ಸರ್ ಗುಂಡನೆ ಸ್ಟೇಜ್ ಕಟ್ಟಿದ್ದರು. ಹಿಂಬದಿಯಲ್ಲಿ ಕಬ್ಬಿಣದ ದೊಡ್ಡ ದೊಡ್ಡ ಆಕೃತಿಗಳನ್ನು ನಿಲ್ಲಿಸಿದ್ದರು. ಷೋ ದಿನವೂ ನಿಗದಿಯಾಯ್ತು. ಇನ್ನೇನು ಇವತ್ತೇ ಷೋ, ಬೆಳಗ್ಗೆ ರಿಹರ್ಸಲ್ ಮುಗಿಸಿ ಎಲ್ಲರೂ ಊಟಕ್ಕೆ ಹಾಸ್ಟೆಲ್ಗೆ ಹೋಗಿ, ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಸಂಜೆ ಮೂರು ಗಂಟೆಗೆ ಮತ್ತೆ ಸ್ಟೇಜ್ ಗೆ ಬಂದೆವು. ನಾಲ್ಕು ಗಂಟೆಗೆ ಶುರುವಾದ ಮಳೆ ನಿಂತಿದ್ದು ಸಂಜೆ ಆರಕ್ಕೋ ಏನೋ. ರಂಗಾಯಣದಲ್ಲಿ ಒಂದು ಪ್ರತೀತಿ ಇದೆ. ಹೆಚ್ಚು ಕಡಿಮೆ ರಂಗಾಯಣದ ನಾಟಕಗಳ ಪ್ರಥಮ ಪ್ರದರ್ಶನ ಸರಾಗವಾಗಿ ನಡೆದಿಲ್ಲ. ಯಾವಾಗಲೂ ಪ್ರಥಮ ಪ್ರದರ್ಶನದ ವೇಳೆ ಮಳೆ ಬರುವುದು ಶಾಸ್ತ್ರವೇನೋ ಎಂಬಂತಾಗಿಬಿಟ್ಟಿದೆ. ಜೋರು ಮಳೆ ಬಂದು ನಾಟಕ ನಿಲ್ಲುವುದು ಅಥವಾ ನಾಟಕದ ಮದ್ಯೆ ಮದ್ಯೆ ಮಳೆ ಬಂದು, ನಿಂತು ಆಗುವುದು, ಅಥವಾ ನಾಟಕದ ಜೊತೆ ಜೊತೆಯಲ್ಲೇ ಮಳೆ ಆಟವಾಡುತ್ತ ಇರುವುದು, ಇಲ್ಲಾ, ನಾಟಕ ಮುಗಿದ ತಕ್ಷಣ ಪ್ರೇಕ್ಷಕರು ಮನೆಗೆ ಹೋಗಲಾಗದ ಹಾಗೆ ಜೋರು ಮಳೆ ಬರುವುದು ಹೀಗೆ ಆಗುವುದು ಯಾವಾಗಲೂ ನಡೆದು ಬಂದಿರುವ ರೀತಿ.
ಹಾಗೆಯೇ ‘ಭೂಮಿಗೀತ’ ಪ್ರದರ್ಶನದ ದಿನವೂ ಆಗಿತ್ತು. ಸಂಜೆ ರಂಗದ ಮೇಲಿರಬೇಕಾಗಿದ್ದ ಕಲಾವಿದರೆಲ್ಲ ಮಂಡಿವರೆಗೆ ಪ್ಯಾಂಟ್ ಮಡಚಿ, ಭೂಮಿಗೀತ ಸ್ಟೇಜ್ ನಲ್ಲಿ ಮಂಡಿವರೆಗೆ ನಿಂತಿದ್ದ ನೀರನ್ನು ಕೆಲವರು ದೋಚಿ ದೋಚಿ ಹೊರಗೆ ಹಾಕಿತ್ತಿದ್ದರೆ ಇನ್ನೂ ಕೆಲವರು ಪೊರಕೆ ಹಿಡಿದು ನೀರನ್ನು ಮೋರಿಗೆ ತಳ್ಳುವುದರಲ್ಲಿ ನಿರತರಾಗಿದ್ದರು. ಕೆಲವರು ಷೋ ಮಾಡಲು ಸಾಧ್ಯವಾಗಲಿಲ್ಲವಲ್ಲ ಅಂತ ಬೇಸರಿಸಿಕೊಳ್ಳುತ್ತಿದ್ದಾಗ ಕಾರಂತರು ಹೇಳಿದ ಮಾತು ನೆನಪಾಗುತ್ತದೆ. ಮಳೆಗಿಂತಲೂ ನಾಟಕ ಮುಖ್ಯ ಅಲ್ಲ. ಮಳೆ ಬಂದದ್ದು ಒಳ್ಳೇದಾಯಿತು. ಭೂಮಿ ತಣ್ಣಗಾಯಿತು. ನಾಟಕ ನಾಳೆ ಮಾಡಿದರಾಯಿತು ಎಂದು ಹೇಳಿ ಹೊರಟೇ ಬಿಟ್ಟರು.
ದ್ವಾರಕೀ ಸರ್, ಆ ನಾಟಕಕ್ಕೆಂದೇ ಗುಂಡನೆಯ ಸ್ಟೇಜ್ ಕಟ್ಟಿದ್ದರು. ಹಿಂಬದಿಯಲ್ಲಿ ಕಬ್ಬಿಣದ ದೊಡ್ಡ ದೊಡ್ಡ ಆಕೃತಿಗಳನ್ನು ನಿಲ್ಲಿಸಿದ್ದರು. ಈಗ ಅದೇ ಜಾಗದಲ್ಲಿ ಹೊಸದಾಗಿ ಪ್ರಸನ್ನ ಅವರ ವಿನ್ಯಾಸದಲ್ಲಿ ನಿರ್ಮಿತವಾಗಿರುವ ರಂಗಸ್ಥಳವೇ ಭೂಮಿಗೀತ. ರಂಗಸ್ಥಳದ ಆಕಾರ ಬದಲಾದರೂ ತನ್ನ ಹಳೆಯ ಹೆಸರಿನಲ್ಲಿಯೇ ಈ ಸ್ಟೇಜ್ ಉಳಿದಿದೆ. ಇದು ರಂಗಾಯಣದಲ್ಲಿರುವ ಇಂಟಿಮೇಟ್ ಪ್ರೊಸೀನಿಯಂ ಥಿಯೇಟರ್.
ನಾಟಕ ಪ್ರದರ್ಶನ ನಿರಂತರವಾಗಿ ಹತ್ತು ದಿನಗಳ ಕಾಲ ನಡೆಯಿತು. ಆಗ ನಾಟಕ ನೋಡಲೆಂದು ಬಂದ ಕೀರ್ತಿನಾಥ ಕುರ್ತುಕೋಟಿ, ಕೆ.ವಿ.ಸುಬ್ಬಣ್ಣ. ಎಂ.ಎಸ್.ಮರುಳಸಿದ್ದಪ್ಪ, ಕೀರಂ ನಾಗರಾಜ, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್.. ಹೀಗೆ ಬಹಳಷ್ಟು ಜನರನ್ನು ಒಳಗೊಂಡ ದೊಡ್ಡ ಸಾಹಿತಿಗಳ ಗುಂಪು ನಮ್ಮೊಡನಿತ್ತು. ಅವರು ತಮ್ಮ ಅಭಿಪ್ರಾಯಗಳನ್ನು ತಿಳಿಸಿ, ಅದರ ಬಗ್ಗೆ ಆರೋಗ್ಯಕರವಾದ ಸುದೀರ್ಘ ಚರ್ಚೆ ನಡೆಸಿದ್ದೆಲ್ಲ ಈಗ ನೆನಪು.
ಅಲ್ಲದೆ ಅದೇ ನಾಟಕವನ್ನು ಬೆಂಗಳೂರಿಗೆ ತಂದಾಗ ನ್ಯಾಷನಲ್ ಕಾಲೇಜು ಕ್ಯಾಂಪಸಿನಲ್ಲಿ ಅಭಿನಯಿಸಿದ್ದೆವು. ಕಾಲೇಜಿನೊಳಗೆ ಅದೇ ಮಾದರಿಯ ಗುಂಡನೆಯ ಸ್ಟೇಜ್ ಕಟ್ಟಲು ಒಪ್ಪಿಗೆ ನೀಡಿದ್ ಹೆಚ್.ನರಸಿಂಹಯ್ಯನವರು ಅಷ್ಟೂ ದಿನ ನಮ್ಮೊಡನಿದ್ದು ಸಡಗರಿಸಿದ ನೆನಪು ……ಭೂಮಿಗೀತದ ನೆನಪು
ಸಿ ಬಸವಲಿಂಗಯ್ಯ ‘ಮಲೆಗಲ್ಲಿ ಮದುಮಗಳು’ ನಾಟಕವನ್ನು ರಂಗಕ್ಕೆ ತಂದು ಯಶಸ್ವಿಯಾಗಿದ್ದಾರೆ. ಯಾಕೆ ಇಂತಹ ಪ್ರಯೋಗ ಅವರಿಗೆ ಬೇಕಾಯಿತು? ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು.
ನಾಟಕ ಪ್ರದರ್ಶನದ ಸಂದರ್ಭದಲ್ಲಿ ಅಡ್ಡಾಡುತ್ತಾ ಅವರೊಂದಿಗೆ ಮಾತಿಗಿಳಿದೆ. ಅದರ ಸಾರ ಇಲ್ಲಿದೆ. ಇದಲ್ಲದೆ ಸಂಗೀತ ನಿರ್ದೇಶಕ ಚೀನೀ, ದ್ವಾರ್ಕಿ ಸರ್ ಜೊತೆಗೂ ಮಾತಾಡಿದ್ದೇನೆ. ಅವು ಒಂದೊಂದೇ ಈ ಬ್ಲಾಗ್ ಅಂಗಳದಲ್ಲಿ ಕಾಣಿಸಿಕೊಳ್ಳುತ್ತವೆ.
ಕರ್ನಾಟಕದ ರಂಗಾಯಣ ರೆಪರ್ಟರಿ ಬಗ್ಗೆ ಹಲವಾರು ವಾದ ವಿವಾದಗಳಿರುವಂತಹ ಸಂದರ್ಭದಲ್ಲಿ, ರಂಗಾಯಣ ಸಂಕಷ್ಟದಲ್ಲಿರುವಾಗ, ರಂಗಾಸಕ್ತರೆಲ್ಲರೂ ತಮ್ಮ ಬಾಯಲ್ಲಿ ರಂಗಾಯಣವನ್ನು ಎಲೆ ಅಡಿಕೆಯಂತೆ ಜಗಿಯುತ್ತಿರುವಾಗ, ರಂಗಾಯಣದ ಮಾಜಿ ನಿರ್ದೇಶಕರಾಗಿದ್ದ ಸಿ. ಬಸವಲಿಂಗಯ್ಯನವರು ‘ಮಲೆಗಳಲ್ಲಿ ಮದುಮಗಳು’ ಮೂಲಕ ರಂಗಾಯಣದ ಕಲಾವಿದರ ಜೊತೆ ದೊಡ್ಡ ಸಾಹಸಕ್ಕೆ ಕೈ ಹಾಕಿ, ಯಶಸ್ವಿಯಾಗಿ , ಆಡುವ ಬಾಯಿಗಳಿಗೆ ಕೆಲಸದ ಮೂಲಕ ಉತ್ತರ ಕೊಟ್ಟಿದ್ದಾರೆ.
ಅವರನ್ನು ಈ ಸಂದರ್ಭದಲ್ಲಿ ಭೇಟಿಯಾದಾಗ ಹಂಚಿಕೊಂಡ ಮಾತುಗಳು ಇವು…
ರಂಗಾಯಣಕ್ಕೀಗ 21 ರ ಹರೆಯ….
ನಾನು NSD ಮುಗಿಸಿ ವಾಪಸ್ಸು ಬೆಂಗಳೂರಿಗೆ ಬಂದಾಗಲೇ ನಿರ್ಧರಿಸಿದ್ದೆ. ರಂಗಮಂದಿರಗಳು ಇಲ್ಲದ ಜಾಗದಲ್ಲಿ ಹೋಗಿ ಕೆಲಸ ಮಾಡಬೇಕು ಅಂತ. ಓದಿ
ಬೆಳೆದಿದ್ದೆಲ್ಲ ಬೆಂಗಳೂರೇ ಆದರೂ ಬೆಂಗಳೂರಿನ ಆಚೆ ಕೆಲಸ ಮಾಡಲು ಪ್ರಾರಂಭಿಸಿದೆ. ರಂಗಭೂಮಿಯಲ್ಲಿ ರಂಗಮಂದಿರಗಳೇ ಎಲ್ಲ ಅಲ್ಲ. ನಾವು alternative ಆದ theatre space ಹುಡುಕಬೇಕು ಅಂತ ಅನ್ನಿಸೋದು.
ಈ ಸಂಬಂಧಿಯಾಗಿ ಮೇಷ್ಟ್ರು ತುಂಬ ಪ್ರಯೋಗಗಳನ್ನು ಮಾಡಿದಾರೆ. ಭೂಪಾಲ್ ಆಗಬಹುದು, ರಂಗಾಯಣ ಆಗಬಹುದು. ಇಲ್ಲಿ ಮೈಸೂರಿನಲ್ಲಿ ಇಷ್ಟು ದೊಡ್ಡ ಕಲಾಮಂದಿರ ಇದ್ದರೂ ಕಾರಂತರು ಅದರ ಹಿತ್ತಿಲಲ್ಲಿ ರಂಗಾಯಣವನ್ನು ಪ್ರಾರಂಭಿಸಿದರು. ವನರಂಗ ಸೃಷ್ಟಿಯಾಯಿತು. proscenium theatre ಗಳಿಗೆ ಹಿತ್ತಿಲು ಇರೋದಿಲ್ಲ . ಆದರೆ ರಂಗಭೂಮಿಯ ಕೆಲಸಕ್ಕೆ ಹಿತ್ತಿಲು ಬೇಕು ಅಂತ ನನಗನ್ನಿಸಿತು. ನಾನೇನು proscenium ವಿರೋಧಿ ಅಲ್ಲ. ಆದರೆ ಬೇರೆ ಬೇರೆ ರೀತಿಯ ಆವರಣ ಹುಡುಕುವುದು ನನ್ನ text ನ ಜರೂರಿ ಕೂಡ ಅಂತ ನನಗನ್ನಿಸತ್ತೆ.. ಚೋಮ ನಾಟಕ ಮಾಡಬೇಕಾದರೆ ನನಗೆ ಕಲಾಕ್ಷೇತ್ರದಲ್ಲಿ ಮಾಡಕ್ಕಾಗಲ್ಲ. ಯಾಕಂದರೆ ನಮ್ಮ ಮನೆಗಳ ಹಿತ್ತಿಲಿಗೇ ಚೋಮನಂತಹವರನ್ನು ಬಿಟ್ಟುಕೊಳ್ಳದೆ ಇರುವವರು ನಾವು. ಇನ್ನು ಕಲಾಕ್ಷೇತ್ರದ ಮೆಟ್ಟಿಲು ಹೇಗೆ ಹತ್ತಿಸೋಕೆ ಸಾಧ್ಯ? ಅದು ನನಗೆ ಅಣಕ ಅಂತ ಅನ್ನಿಸತ್ತೆ. space ಅನ್ನುವುದು ಕೇವಲ ನನ್ನ ಆಯ್ಕೆ ಅಲ್ಲ. ಅದು ನನ್ನ intepretation ಕೂಡ. ನಾನು ರಂಗಾಯಣದಲ್ಲಿ ಕುಸುಮಬಾಲೆ ಮಾಡಿದ ಮೇಲೆ ನನಗೆ ನನ್ನ ವಿಚಾರಗಳಲ್ಲಿ ಇನ್ನೂ clarity ಸಿಗ್ತಾ ಹೋಯಿತು.
ಇನ್ನು ರಂಗಾಯಣದ ವಿಷಯಕ್ಕೆ ಬರೋದಾದರೆ, ರಂಗಾಯಣ ನನಗೆ ಹೊಸದಲ್ಲ. ಇಲ್ಲೆ ಇದ್ದವನು, ದುಡಿದವನು ಮತ್ತು ನಿದರ್ೆಶಕನಾಗಿ 6 ವರ್ಷ ಕಾಲ ನಿಭಾಯಿಸಿದವನು. ನನಗೆ ಇಲ್ಲಿನ ಕಲಾವಿದರ body and mind ಎರಡರ ಪರಿಚಯ ಚೆನ್ನಾಗಿ ಗೊತ್ತು. ಅಲ್ಲದೆ ರಂಗಾಯಣ ಈ ಹಿಂದೆ ಬಹಳಷ್ಟು ಪ್ರಯೋಗಗಳಗೆ ಒಡ್ಡಿಕೊಂಡಿದೆ. ಅತ್ಯಂತ ಕ್ಲಿಷ್ಟವೆನಿಸಿದ ಅಡಿಗರ ಭೂಮಿಗೀತ, ಕನ್ನಡಕ್ಕೆ ಅನುವಾದಿಸಿ ಅಂತ ಅನ್ನಿಸಿಕೊಂಡ ದೇವನೂರರ ಕುಸುಮಬಾಲೆ, ಕಿಂದರಿಜೋಗಿ, ಮೂಕನಮಕ್ಕಳು ಎಂಬ ನೀಳ್ಗವಿತೆ, ತಿರುಕನ ಕನಸು, ಬೇಳೆ ಕಾಳಿನ ಪ್ರಸಂಗ ಎಂಬ ಮುಖವಾಡ ಪ್ರದರ್ಶನ- ಹೀಗೆ ಎಷ್ಟೊಂದು. ಇವು ಯಾವುದೂ ನಾಟಕವಲ್ಲ. ಆದರೆ ರಂಗಾಯಣ ಅದನ್ನು ನಾಟಕವಾಗಿ ಮಾಡಿತು. ಅಲ್ಲದೆ ರಂಗಾಯಣ ನಾಟಕಗಳನ್ನೂ ಮಾಡಿದೆ. ನಾಟಕ ಮಾಡೋದು ರಂಗಾಯಣದ ಧರ್ಮ. ಜೊತೆಗೆ ನಾಟಾಕೇತರ ಸಾಂಸ್ಕೃತಿಕ ವಿವರಗಳನ್ನು ವಿಸ್ತರಿಸುವುದು ಇದೆಯಲ್ಲ, ಅದು ಕೂಡ ನಮ್ಮೆಲ್ಲರ ಸಾಂಸ್ಕೃತಿಕ ಜವಾಬ್ಡಾರಿ. ರಂಗಭೂಮಿಯನ್ನು ಕಟ್ಟಬೇಕು. ನಾಟಕವನ್ನಲ್ಲ. ಹೊಸದನ್ನು ಕಟ್ಟಬೇಕು ಮತ್ತು ಅದನ್ನು ಮುರಿಯಬೇಕು. ಇದು
ಮೇಷ್ಟೃ ನಮ್ಮೆಲ್ಲರಿಗೂ ಕಲಿಸಿದ ಪಾಠ. ಈ ರೀತಿಯ ಹೊಸ ದರ್ಶನಕ್ಕೆ ಹಾತೊರೆಯುವುದು ಮತ್ತು ಅದಕ್ಕಾಗಿ ಕೆಲಸ ಮಾಡುವುದು ಇಲ್ಲಿನ ಕಲಾವಿದರಿಗೆ
ಸಾಧ್ಯ. ಆ ಕಾರಣಕ್ಕೆ ಇಂಥ ಸಾಹಸವನ್ನು ನಾನು ಇವರ ಜೊತೆ ಮಾಡುವುದಕ್ಕೆ ನಿರ್ಧರಿಸಿದೆ.
ಇನ್ನು ಕೃತಿಯ ಬಗ್ಗೆ ಹೇಳೋದಾದರೆ ಮಲೆಗಳಲ್ಲಿ ಮದುಮಗಳು ನಮ್ಮ ಕಾಲದ ಅದ್ಭುತ ಕೃತಿ. ಈ ಕೃತಿಗೂ ಚೌಕಟ್ಟು ಅನ್ನೋದು ಇಲ್ಲ. ಇದರ ಗುರಿಯೇ ಪಯಣ. ಇದು ಎಲ್ಲೂ ಪ್ರಾರಂಭಗೊಳ್ಳುವುದಿಲ್ಲ, ಮೊದಲಿಲ್ಲ, ತುದಿಯಿಲ್ಲ, ಎಲ್ಲೂ ನಿಲ್ಲುವುದೂ ಇಲ್ಲ, ಕೊನೆ ಮುಟ್ಟುವುದೂ ಇಲ್ಲ. ನನಗೆ ಗೊತ್ತಿತ್ತು, ಇದು ತುಂಬಾ ಸಂಕೀರ್ಣವಾದ ಚೌಕಟ್ಟಿಗೆ ಸಿಲುಕದ ವಸ್ತು ಅಂತ. ತುಂಬಾ ಕಷ್ಟ ಅನ್ನುವುದರ ಅರಿವೂ ಇತ್ತು. ಆದರೂ 15 ಜನ ನಟ ನಟಿಯರಿರುವ ರಂಗಾಯಣದ ಕಲಾವಿದರು ಶ್ರೇಷ್ಟರೆಂಬ ಬಲವಾದ ನಂಬಿಕೆಯಿತ್ತು. 150 ಪಾತ್ರಗಳಿರುವ ಕೃತಿಗೆ 60 ಜನ ಹೊಸ ಹುಡುಗರನ್ನು ಆರಿಸಿಕೊಂಡೆ. ದ್ವಾರಕೀ ವಿನ್ಯಾಸದ ಕೆಲಸ ಮಾಡೋಕೆ ಶುರು ಮಾಡಿದರು. ಚೀನಿ ಅಂತೂ ದೆವ್ವ ಬಂದವರ ಹಾಗೆ ಕೆಲಸ ಮಾಡಿದ್ದಾರೆ. ನಾರಾಯಣಸ್ವಾಮಿ script ಮೇಲೆ ಕೆಲಸ ಮಾಡೋಕೆ ಪ್ರಾರಂಭಿಸಿದರು. ಹೊಸ 60 ಜನ ಹುಡುಗರಿಗೆ 15 ಜನ ಹಿರಿಯ ಕಲಾವಿದರು marshal trainers ತರಹ ನಿಂತರು. ನಾನು ಈ ನಾಟಕಕ್ಕೆ blocking ಅಂತ ಏನೂ ಮಾಡಲಿಲ್ಲ. script ಇತ್ತು. space ಇತ್ತು. ಎಲ್ಲಿ ಬೇಕಾದರೂ ಓಡಾಡಿ ಅಂದೆ. ಗುಂಪುಗಳಲ್ಲಿ 62 ಅಧ್ಯಾಯಗಳನ್ನು ಅಶುವಿಸ್ತರಣೆ ಮೂಲಕ ನಾಟಕವನ್ನು ಕಟ್ತಾ ಹೋದೆವು. ಹೊಸ ಹುಡುಗರಿಗೆ theatre orientation ಬೇಕಿತ್ತು. ಹಿರಿಯ ಕಲಾವಿದರ ಜೊತೆಗೆ
ಹೊಂದುಕೊಳ್ಳುವ ಹಾಗೆ ಅವರನ್ನು ತಯಾರು ಮಾಡಬೇಕಾಗಿತ್ತು. ಆ ಕೆಲಸವನ್ನು ನಾನು ಮಾಡಿದೆ. ರಂಗಾಯಣದ ಕಲಾವಿದರಿಗೆ ನಿದರ್ೆಶನ ಮಾಡಬೇಕಾದ ಅಗತ್ಯವೇ ಇಲ್ಲ. ಅವರಿಗೆ ಗೊತ್ತು, ನನಗೆ ಏನು ಬೇಕು ಅಂತ. ಅವರು ಮಾಡ್ತಾರೆ. ಅದಕ್ಕೆ ನಾನು ಹೇಳ್ತಿರೋದು ರಂಗಾಯಣಕ್ಕೀಗ 21 ರ ಹರೆಯ ಅಂತ. ಎಲ್ಲರೂ
ರಂಗಾಯಣ ಕಲಾವಿದರ ದೇಹ ನೋಡ್ತಿದಾರೆಯೇ ಹೊರತು ಅವರ ಪ್ರತಿಭೆ, ಭೌದ್ಧಿಕತೆ,ಪ್ರೌಢಿಮೆಗಳ ಬಗ್ಗೆ ಯಾರಿಗೂ ಗಮನವೇ ಇಲ್ಲ. ನಾನಂತು ಅದನ್ನು
ಕಂಡುಕೊಂಡಿದ್ದೇನೆ. ಅದಕ್ಕಾಗಿಯೇ ಈ ದೊಡ್ಡ ಸಾಹಸವನ್ನು ಇವರ ಜೊತೆ ಮಾಡಿದೆ. ಅಲ್ಲದೆ ಕಾ.ತ.ಚಿಕ್ಕಣ್ಣ ಅವರಂತ ಒಳ್ಳೆ ಅಧಿಕಾರಿ ನಮ್ಮ ಜೊತೆ ಇದ್ದಿದ್ದಕ್ಕೆ
ಇದು ಸಾಧ್ಯವಾಯಿತು.
ನನ್ನ ಮುಖ್ಯ ಉದ್ದೇಶ ಒಟ್ಟು ರಂಗಭೂಮಿಯ ಸಿದ್ಧ ಚೌಕಟ್ಟನ್ನು ಎಲ್ಲ ಅರ್ಥಗಳಲ್ಲೂ ಒಡೆಯುವುದಾಗಿತ್ತು. space ಆಗಬಹುದು, ನಾಟಕ ಕೃತಿಯಾಗಬಹುದು, ಸಂಗೀತವಾಗಬಹುದು. frame ಅನ್ನು ಒಡೆಯೋಕೆ ಹೊರಟಿರುವ ನಾನು pre condition ಆಗಿರುವ mindset ಅನ್ನು ಒಡೀತೀನಿ. ತಯಾರಿಯ ಸಂಧರ್ಭದಲ್ಲಿ ಎಲ್ಲರೂ ತಮಾಷೆ ಮಾಡ್ತಿದ್ದರು. ನಗ್ತಾ ಇದ್ದರು. 9 ಗಂಟೆ ನಾಟಕ ಯಾರು ನೋಡ್ತಾರೆ? ಬಸು ಮತ್ತು lighting ನವರು ಮಾತ್ರವೇ ಕೊನೇಗೆ ಉಳಿದಿರ್ತಾರೆ ಅಂತ. ಆದರೆ ಜನ ಎಲ್ಲವನ್ನು ಸುಳ್ಳು ಮಾಡಿಬಿಟ್ಟರು.ಈಗ ಎಲ್ಲರಿಗೂ ಗೊತ್ತು. ಜನ ಹೇಗೆ ನಾಟಕ ನೋಡ್ತಿದಾರೆ ಅಂತ. ಈ ರೀತಿ ನಾಟಕ ನೋಡೋಕೆ ಟಿಕೆಟ್ ಗಾಗಿ ಪರದಾಡಿದ್ದು ಎಲ್ಲೂ ಇಲ್ಲ. ಇದೊಂದು ನಿಜವಾಗಿಯೂ ಅಚ್ಚರಿಯ ಸಂಗತಿ. ನಾವೇನೂ ಇಲ್ಲಿ ದೊಡ್ಡ ಪವಾಡ ಮಾಡಿಲ್ಲ. ಆದರೆ ಇಡೀ ತಂಡ ಒಟ್ಟಿಗೇ ಕೆಲಸ ಮಾಡಿ ಒಂದು ಒಳ್ಳೆಯ ಕೃತಿಯನ್ನು ಕೊಟ್ಟರೆ ಜನ ನೋಡೇ ನೋಡ್ತಾರೆ ಅಷ್ಟೆ.
ಎನ್ನುತ್ತಾ ಬಸು ಮಾತಾಡುತ್ತಲೆ ಇದ್ದರು. ಅವರೊಳಗಿನ ಮಾತು ಇನ್ನೂ ಮುಗಿದಿರಲಿಲ್ಲ





















